February 24, 2026
Tuesday, February 24, 2026
spot_img

ಜಾತ್ರೆ ಟೈಮ್‌ನಲ್ಲಿ ಕೋಮುಗಲಭೆ ಹುಟ್ಟುಹಾಕೋಕೆ ಈ ಕೊಲೆ ನಡೆದಿದೆ: ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವಮೊಗ್ಗದಲ್ಲಿ ಕೋಮು ಗಲಭೆ ಹುಟ್ಟುಹಾಕೋದಕ್ಕೆ ಮಾರಿ ಜಾತ್ರೆ ಸಮಯದಲ್ಲಿ ಹಿಂದು ಹುಡುಗನ ಕೊಲೆ ನಡೆದಿದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಲೇಬೇಕು ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

10ನೇ ತರಗತಿ ಓದುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಯಾವುದೇ ಕಾರಣ ಇಲ್ಲದೇ ಹತ್ಯೆ ಮಾಡಿದ್ದಾರೆ. 10ನೇ ಕ್ಲಾಸ್‌ ವಿಶೇಷ ತರಗತಿ ಮುಗಿಸಿಕೊಂಡು ಬರುತ್ತಿದ್ದಾಗ ಕೊಂದಿದ್ದಾರೆ. ಭಟ್ಕಳ, ಬಾಗಲಕೋಟೆ ಯಲ್ಲಿ ಇಂತಹ ಗಲಾಟೆಗಳು ನಡೆದಿವೆ.

ದೇಶದ ಹಲವು ಕಡೆ ಕೋಮು ಗಲಭೆ ನಡೆಸೋ ಸಂಚಿನ ಹಿನ್ನಲೆಯಲ್ಲಿ ಭಯೋತ್ಪಾದನಾ ಷಡ್ಯಂತ್ರದ ಕಾರಣಕ್ಕೆ ಕೆಲವರ ಬಂಧನವಾಗಿದೆ. ಇವೆಲ್ಲವನ್ನು ನೋಡಿದರೆ ಯೋಜಿತವಾಗಿ ಕೋಮು ಗಲಭೆ ಹುಟ್ಟು ಹಾಕಲು ಇದನ್ನು ಮಾಡುತ್ತಿದ್ದಾರೆ ಎಂದು ಕಾಣಿಸುತ್ತಿದೆ. ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹ ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !