February 25, 2026
Wednesday, February 25, 2026
spot_img

OTT | ಅಶ್ಲೀಲ ವಿಡಿಯೋಗಳಿಗೆ ಐದು ಒಟಿಟಿ ಪ್ಲಾಟ್‌ಫಾರ್ಮ್ಸ್‌ಗೆ ಬಿಗ್‌ ಶಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆನ್‌ಲೈನ್ ಮಾಧ್ಯಮಗಳ ವಿವಿಧ ವೇದಿಕೆಗಳಲ್ಲಿ ಅಶ್ಲೀಲ ವಿಡಿಯೋ ಹಾಗೂ ಕಾರ್ಯಕ್ರಮಗಳ ಪ್ರಸಾರಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿಸಿದೆ.

ಕೇಂದ್ರ ಸರ್ಕಾರ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಿಗೆ ಬಿಗ್‌ ಶಾಕ್‌ ನೀಡಿದೆ. ಈಗಾಗಲೇ ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಅಶ್ಲೀಲ ಹಾಗೂ ಪೋರ್ನೋಗ್ರಾಫಿಕ್ ದೃಶ್ಯಗಳ ಪ್ರಸಾರವನ್ನು ಮುಂದುವರಿಸಿರುವ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ವನ್ನು ಸರ್ಕಾರ ನಿಷೇಧಿಸಿದೆ.

ನಿರ್ಬಂಧಿಸಲಾದ ಡಿಜಿಟಲ್ ಸೇವೆಗಳೆಂದರೆ MoodXVIP, Koyal Playpro, Digi Movieplex, Feel ಮತ್ತು Jugnu.ಅಧಿಕಾರಿಗಳ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿ ಒಟಿಟಿ ವೇದಿಕೆಗಳನ್ನು ನಿರ್ಬಂಧಿಸಿದೆ.

ವರದಿಯ ಪ್ರಕಾರ ಈ ಒಟಿಟಿಯಲ್ಲಿ ಲೈಂಗಿಕ ಪ್ರಚೋದನೆ ರೀತಿ ಕಟೆಂಟ್‌ ಸ್ಟ್ರೀಮಿಂಗ್‌ ಆಗಿದೆ. ಇದು ಐಟಿ ಕಾಯ್ದೆಯ ಸೆಕ್ಷನ್ 67A ಅನ್ನು ಉಲ್ಲಂಘಿಸುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ವೀಡಿಯೊಗಳು ನಗ್ನತೆಯನ್ನು ಒಳಗೊಂಡಿರುತ್ತವೆ. ಇದರಿಂದಾಗಿ ಅವು ಅಶ್ಲೀಲ ಸ್ವರೂಪದಲ್ಲಿರುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !