February 26, 2026
Thursday, February 26, 2026
spot_img

SAFETY | ಜನದಟ್ಟಣೆ ಇರುವ ಕಡೆ ಮಕ್ಕಳ ಕೈಯನ್ನು ಬಿಡಲೇಬೇಡಿ, ಕಳೆದುಹೋಗದಂತೆ ಇನ್ನೇನು ಮಾಡಬಹುದು?

ನೀನು ಜಾತ್ರೆಯಲ್ಲಿ ಕಳೆದುಹೋಗಿದ್ದೆ, ಪಾಪ ಎಂದು ಮನೆಗೆ ಕರೆದುಕೊಂಡು ಬಂದು ಸಾಕಿದ್ದೀವಿ ಎಂದು ಅಕ್ಕನೋ ಅಣ್ಣನೋ ತಮಾಷೆಗೆ ಹೇಳಿಯೇ ಇರ್ತಾರೆ. ಅವರ ಮಾತು ತಮಾಷೆ ಇರಬಹುದು. ಆದರೆ ಎಷ್ಟೋ ಮಕ್ಕಳು ದೊಡ್ಡ ಕ್ರೌಡ್‌ನಲ್ಲಿ ಕಳೆದುಹೋಗುತ್ತಾರೆ. ಮಕ್ಕಳು ಮತ್ತೆ ಸಿಕ್ಕರೂ ಅವರ ಮನಸ್ಸಿನಲ್ಲಿ ಭಯ ಹೋಗೋದಿಲ್ಲ. ಜಾತ್ರೆ, ಎಕ್ಸಿಬಿಷನ್‌ ಇನ್ನಿತರ ಜನದಟ್ಟಣೆ ಇರುವ ಕಡೆ ಹೋಗುವಾಗ ತಪ್ಪದೇ ಈ ರೂಲ್ಸ್‌ ಫಾಲೋ ಮಾಡಿ..

ಮಕ್ಕಳ ಕೈ ಮೇಲೆ ನಿಮ್ಮ ನಂಬರ್‌ನ್ನು ದೊಡ್ಡದಾಗಿ ಬರೆಯಿರಿ, ಮಕ್ಕಳ ಬ್ಯಾಗ್‌ ಅಥವಾ ಬಳೆ ಯಾವುದರಲ್ಲಾದರೂ ನಂಬರ್‌ ಬರೆದ ಚೀಟಿ ಅಂಟಿಸಿ.

ಮಕ್ಕಳಿಗೆ ನಿಮ್ಮ ತರಹದ ಮ್ಯಾಚಿಂಗ್‌ ಬಟ್ಟೆ ಅಥವಾ ಹೊಳೆಯುವ ನಿಯಾನ್‌ ಬಣ್ಣದ ಬಟ್ಟೆಗಳನ್ನು ಹಾಕಿ.

ಟ್ರಿಪ್‌ ಹೋದಾಗ ನಿತ್ಯವೂ ಮಕ್ಕಳು ರೆಡಿಯಾದ ಮೇಲೆ ಒಂದು ಫೋಟೊ ತೆಗೆದುಕೊಳ್ಳಿ. ಯಾವ ಬಟ್ಟೆ ಹಾಕಿದ್ದಾರೆ, ಶೂ ಹೇಗಿದೆ ಎಂದು ಗೊತ್ತಿರುತ್ತದೆ.

ಟ್ರಿಪ್‌ ಅಥವಾ ಜಾತ್ರೆಯಲ್ಲಿ ಯಾವುದಾದರೂ ದೊಡ್ಡ ಅಂಗಡಿ, ಸಿಗ್ನಲ್‌ ತೋರಿಸಿ. ಅಕಸ್ಮಾತ್‌ ತಂದೆ ತಾಯಿಯಿಂದ ಬೇರ್ಪಟ್ಟರೆ ಈ ಜಾಗಕ್ಕೆ ಬನ್ನಿ ಎಂದು ಮಕ್ಕಳಿಗೆ ತಿಳಿಹೇಳಿ.

ಟೆಕ್ನಾಲಜಿ ಬಳಕೆ ಮಾಡಿಕೊಂಡು ಮಕ್ಕಳ ಶೂ ಅಥವಾ ಬ್ಯಾಗ್‌ನಲ್ಲಿ ಜಿಪಿಎಸ್‌ ಟ್ರಾಕರ್‌ ಹಾಕಿ.

ಆದಷ್ಟು ಮಕ್ಕಳನ್ನು ಎತ್ತಿಕೊಂಡು, ಟ್ರಾಲಿಯಲ್ಲಿ ಮಲಗಿಸಿಕೊಂಡು ಅಥವಾ ಹೆಗಲ ಮೇಲೆ ಕೂರಿಸಿಕೊಂಡು ಓಡಾಡಿ.

ಮಕ್ಕಳನ್ನು ಕಳೆದುಹೋದ ಜಾಗದಲ್ಲೇ ಇರುವಂತೆ ಹೇಳಿ, ಮಹಿಳೆಯರು ಅಥವಾ ತಾಯಂದಿರ ಬಳಿ ಹೋಗಿ ಸಹಾಯ ಕೇಳುವಂತೆ ಮನವಿ ಮಾಡಿ.

ಮಕ್ಕಳು ಕಳೆದುಹೋಗೇ ಹೋಗ್ತಾರೆ ಅಂತಲ್ಲ, ಆ ಸಮಯದಲ್ಲಿ ಪ್ಯಾನಿಕ್‌ ಆಗದೇ ಮಕ್ಕಳಿಗೆ ಏನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !