February 26, 2026
Thursday, February 26, 2026
spot_img

ಯೂಟ್ಯೂಬ್ ಪ್ರೀಮಿಯಂ ಲೈಟ್‌ಗೆ ಹೊಸ ಫೀಚರ್‌: ವಿಡಿಯೋ ನೋಡ್ಬಹುದು ಅದೂ ಕೂಡ ಇಂಟರ್ನೆಟ್​ ಇಲ್ಲದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಸೇರಿ ಹಲವು ದೇಶಗಳಲ್ಲಿ ಯೂಟ್ಯೂಬ್ ತನ್ನ ಕಡಿಮೆ ಬೆಲೆಯ ‘ಪ್ರೀಮಿಯಂ ಲೈಟ್’ ಯೋಜನೆಯನ್ನು ಮತ್ತಷ್ಟು ಆಕರ್ಷಕಗೊಳಿಸಿದೆ. ಬಳಕೆದಾರರ ಬಹುಕಾಲದ ಬೇಡಿಕೆಯಾದ ಬ್ಯಾಕ್‌ಗ್ರೌಂಡ್ ಪ್ಲೇ ಮತ್ತು ಆಫ್‌ಲೈನ್ ಡೌನ್‌ಲೋಡ್ ವೈಶಿಷ್ಟ್ಯಗಳನ್ನು ಇದೀಗ ಈ ಪ್ಲಾನ್‌ನಲ್ಲಿ ಸೇರಿಸಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಎಲ್ಲಾ ಚಂದಾದಾರರಿಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಬ್ಯಾಕ್‌ಗ್ರೌಂಡ್ ಪ್ಲೇ ಮೂಲಕ ಬಳಕೆದಾರರು ವಿಡಿಯೋಗಳನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಬಹುದು. ಸ್ಕ್ರೀನ್ ಆಫ್ ಮಾಡಿದರೂ ಅಥವಾ ಬೇರೆ ಅಪ್ಲಿಕೇಶನ್ ಬಳಸಿದರೂ ಆಡಿಯೋ ಮುಂದುವರಿಯುತ್ತದೆ. ಇದುವರೆಗೆ ಈ ಆಯ್ಕೆ ಪೂರ್ಣ ಪ್ರೀಮಿಯಂ ಪ್ಲಾನ್‌ನಲ್ಲಿ ಮಾತ್ರ ಇತ್ತು.

ಇದನ್ನೂ ಓದಿ:

ಇನ್ನೊಂದು ಮುಖ್ಯ ಸೇರ್ಪಡೆ ಆಫ್‌ಲೈನ್ ಡೌನ್‌ಲೋಡ್. ವೈ-ಫೈ ಅಥವಾ ಮೊಬೈಲ್ ಡೇಟಾ ಬಳಸಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ, ಇಂಟರ್ನೆಟ್ ಇಲ್ಲದೆ ವೀಕ್ಷಿಸಬಹುದು. ಪ್ರಯಾಣದ ವೇಳೆ ಅಥವಾ ದುರ್ಬಲ ನೆಟ್‌ವರ್ಕ್ ಇರುವ ಪ್ರದೇಶಗಳಲ್ಲಿ ಇದು ಉಪಯುಕ್ತ.

ಭಾರತದಲ್ಲಿ ಪ್ರೀಮಿಯಂ ಲೈಟ್ ತಿಂಗಳಿಗೆ ₹89 ದರದಲ್ಲಿ ಲಭ್ಯ. ಪೂರ್ಣ ಪ್ರೀಮಿಯಂ ಯೋಜನೆ ₹149ರಿಂದ ಆರಂಭವಾಗುತ್ತದೆ. ಹೊಸ ಫೀಚರ್‌ಗಳೊಂದಿಗೆ ಲೈಟ್ ಪ್ಲಾನ್‌ ದರದಲ್ಲಿ ಬದಲಾವಣೆ ಆಗುವುದೇ ಎಂಬುದರ ಬಗ್ಗೆ ಕಂಪನಿ ಇನ್ನೂ ಸ್ಪಷ್ಟನೆ ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !