February 26, 2026
Thursday, February 26, 2026
spot_img

ವರದಕ್ಷಿಣೆ ಹಣಕ್ಕೆ ಕಿರುಕುಳ ಆರೋಪ: ಪತ್ನಿಯನ್ನೇ ಕೊಂದ ಪಾಪಿ ಪತಿ

ಹೊಸದಿಗಂತ ವರದಿ ಹಾಸನ:

ಅನುಮಾನ ಹಾಗೂ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಜಿಲ್ಲೆ, ಬೇಲೂರು ತಾಲ್ಲೂಕಿನ, ರಾಜನಸಿರಿಯೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಚನ್ನಮ್ಮ (34) ಕೊಲೆಯಾದ ಮಹಿಳೆ. ಮಧು (40) ಪತ್ನಿಯನ್ನೇ ಕೊಲೆಗೈದ ಆರೋಪಿ.

ಹದಿನೈದು ವರ್ಷಗಳ ಹಿಂದೆ ರಾಜನಸಿರಿಯೂರು ಗ್ರಾಮದ ಮಧು ಜೊತೆ ವಿವಾಹವಾಗಿದ್ದ ಚನ್ನಮ್ಮ ಹಲವು ವರ್ಷಗಳಿಂದ ಮಧು ಪತ್ನಿ ಮೇಲೆ ಅನುಮಾನಗೊಂಡು ಜಗಳವಾಡುತ್ತಿದ್ದರು. ಕುಟುಂಬಸ್ಥರು ಹತ್ತಾರು ಬಾರಿ ರಾಜಿ ಪಂಚಾಯ್ತಿ ಮಾಡಿದ್ದರು. ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಚನ್ನಮ್ಮ ಪೋಷಕರು ಆಟೋ ಕೊಡಿಸಿದ್ದರು.

ಇದನ್ನೂ ಓದಿ:

ಮಧು ಫೆ.18 ರಂದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ, ಗಂಭೀರವಾಗಿ ಗಾಯಗೊಂಡು ಚನ್ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲಿ ಚನ್ನಮ್ಮ ಸಾವನ್ನಪ್ಪಿದ್ದಾರೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !