April 24, 2026
Friday, April 24, 2026
spot_img

ಅನುಶ್ರೀ, ರೋಷನ್ ಮದುವೆ ಸಂಭ್ರಮ: ಲವ್ ಸ್ಟೋರಿ ಕುರಿತು ಜೋಡಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆ್ಯಂಕರ್ ಅನುಶ್ರೀ ಅವರನ್ನು ರೋಷನ್ ರಾಮಮೂರ್ತಿ ವರಿಸಿದ್ದಾರೆ.ಬೆಂಗಳೂರಿನ ಹೊರವಲಯದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ.

ಇದೀಗ ಮದುವೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು , ಮದುವೆ ಬಹಳ ಸುಂದರವಾಗಿ, ಸರಳವಾಗಿ ನಡೆದಿದೆ. ಬಹಳ ಕಡಿಮೆ ಜನರ ಎದುರು ನಮ್ಮಿಬ್ಬರ ವಿವಾಹ ಆಗಬೇಕು ಎಂಬುದು ಆಸೆ ಆಗಿತ್ತು. ಇವರ ಹೆಸರು ರೋಷನ್ ರಾಮಮೂರ್ತಿ. ಕುಶಾಲ ನಗರದಲ್ಲಿ ಇರುವವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಈಗ ನನ್ನ ಮದುವೆ ಆಗಿದ್ದಾರೆ. ಮದುವೆಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ ಅನುಶ್ರೀ.

‘ನಮ್ಮದು ಸಿಂಪಲ್ ಲವ್ ಸ್ಟೋರಿ. ಅದನ್ನು ಯಾರು ಹೇಳಿದರೂ ನಂಬುತ್ತಾ ಇರಲಿಲ್ಲ. ನಾವಿಬ್ಬರು ಫ್ರೆಂಡ್ಸ್ ಆದೆವು. ಕಾಫಿ ಕುಡಿದೆವು. ನನಗೆ ಅವರು ಇಷ್ಟ ಆದರು. ಅವರಿಗೆ ನಾನು ಇಷ್ಟ ಆದೆ. ಲವ್ ಆಯಿತು. ಮದುವೆ ಆದೆವು. ರೋಷನ್ ಕೂಡ ಅಪ್ಪು ಸರ್ ಅವರನ್ನು ಬಹಳ ಇಷ್ಟಪಡುವವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ನಾವು ಭೇಟಿ ಮಾಡಿದ್ದು. ಒಂದು ಲೆಕ್ಕದಲ್ಲಿ ಅಪ್ಪು ಸರ್ ಅವರೇ ನಮ್ಮನ್ನು ಸೇರಿಸಿದ್ದಾರೆ’ ಎಂದು ಅನುಶ್ರೀ ಹೇಳಿದ್ದಾರೆ.

ರೋಷನ್ ಮಾತನಾಡುತ್ತಾ, 5 ವರ್ಷದಿಂದ ಅನುಶ್ರೀ ಪರಿಚಯ. ಕಳೆದ 3 ವರ್ಷದಿಂದ ಹೆಚ್ಚು ಆಪ್ತರಾದೆವು. ಶ್ರೀದೇವಿ ಬೈರಪ್ಪ ನನ್ನ ಬಾಲ್ಯದ ಸ್ನೇಹಿತೆ. ಅವರಿಂದಾಗಿ ಅನು ಪರಿಚಯ ಆಯಿತು. ಅನುಶ್ರೀ ಸಿಂಪಲ್ ಹುಡುಗಿ. ನನಗೆ ಎಂದಿಗೂ ಅವರೊಬ್ಬ ಸೆಲೆಬ್ರಿಟಿ ಅಂತ ಅನಿಸಿಯೇ ಇಲ್ಲ. ಆ ಗುಣವೇ ನನಗೆ ತುಂಬ ಇಷ್ಟ ಆಯಿತು. ನಾನು ಚೆನ್ನಾಗಿ ಅಡುಗೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚಿಕ್ಕ ಚಿಕ್ಕ ಸಂತೋಷಗಳನ್ನು ತುಂಬ ಇಷ್ಟಪಡುತ್ತೇವೆ. ಅವರಿಗೆ ಸಹಾಯ ಮಾಡುವ ಮನೋಭಾವ ಇದೆ. ಅದು ನನಗೆ ಬಹಳ ಇಷ್ಟ ಆಗಿದೆ. ನಮ್ಮ ಅಮ್ಮನಿಗೆ ತುಂಬ ಖುಷಿ ಆಗಿದೆ. ಮದುವೆ ಮಾಡಿಸಿದ್ದು, ಅರೇಂಜ್​​ಮೆಂಟ್ ಮಾಡಿದ್ದು, ಅಪ್ಪು ಸರ್ ಪರವಾಗಿ ಇದನ್ನೆಲ್ಲ ಮಾಡಿದ್ದು ವರುಣ್. ಅವರಿಗೆ ನನ್ನ ಧನ್ಯವಾದಗಳು ಎಂದು ಅನುಶ್ರೀ ಅವರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !