February 27, 2026
Friday, February 27, 2026
spot_img

ಟಿವಿಪಿ ಮುಖ್ಯಸ್ಥ, ನಟ ವಿಜಯ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿವಿಪಿ ಮುಖ್ಯಸ್ಥ, ನಟ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನಟ ವಿಜಯ್ , ನಟ ವಿಜಯ್ ಮದುವೆಯಾಗಿ 27 ವರ್ಷಗಳಾಗಿವೆ. ಇದೀಗ ವಿಜಯ್ ಅವರ ಪತ್ನಿ ಸಂಗೀತಾ ಫೆಬ್ರವರಿ 24 ರಂದು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಅವರ ಮನವಿಯನ್ನು ಸ್ವೀಕರಿಸಿ ಪ್ರಕರಣವನ್ನು ಕುಟುಂಬ ಕಲ್ಯಾಣ ಸಮಿತಿಗೆ ವರ್ಗಾಯಿಸಿದೆ.

ಕಳೆದ ಎರಡು ವರ್ಷಗಳಿಂದ ಈ ಜೋಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು, ಆದರೆ ವಿಜಯ್ ಅಥವಾ ಸಂಗೀತಾ ಇಬ್ಬರೂ ಸಾರ್ವಜನಿಕವಾಗಿ ದೂರವಾಗಿರುವುದನ್ನು ಒಪ್ಪಿಕೊಂಡಿರಲಿಲ್ಲ.

ಸಿನಿಮಾಗಳಲ್ಲಿ ವಿಜಯ್ ಅವರನ್ನು ನೋಡಿ ಸಂಗೀತಾ ಇಷ್ಟಪಟ್ಟಿದ್ದರು. ಆಗ ಸಂಗೀತಾ ವಿದೇಶದಲ್ಲಿದ್ದರು. ಇಷ್ಟದ ನಟ ದಳಪತಿ ವಿಜಯ್ ನೋಡಲು ಸಂಗೀತಾ ಅವರು 1996ರಲ್ಲಿ ಚೆನ್ನೈಗೆ ಆಗಮಿಸಿದ್ದರು. ಅದಾದ ನಂತರದಲ್ಲಿ ಸಾಕಷ್ಟು ಬಾರಿ ಇವರಿಬ್ಬರು ಭೇಟಿಯಾದರು. ಇಬ್ಬರ ಮಧ್ಯೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತು, ಪಾಲಕರು ಇವರಿಬ್ಬರ ಮದುವೆ ಮಾಡಲು ನಿರ್ಧಾರ ಮಾಡಿದರು. ಒಟ್ಟಿನಲ್ಲಿ ಹಿಂದು, ಕ್ರಿಶ್ಚಿಯನ್ ಸಂಪ್ರದಾಯದಂತೆ ಈ ಜೋಡಿ ಮದುವೆಯಾಗಿತ್ತು. ಇವರಿಬ್ಬರಿಗೆ ಓರ್ವ ಗಂಡು, ಒಬ್ಬಳು ಮಗಳಿದ್ದಾಳೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !