ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಮೇಲೆ ಮತ್ತೆ ಹಿಂದೆಂದೂ ನೋಡಿರದ ರೀತಿಯಲ್ಲಿ ಬಲ ಪ್ರಯೋಗ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ.
ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯುದಾಳಿ ನಡೆಸಿ ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಇದಕ್ಕೆ ಪ್ರತೀಕಾರ ತೀರಿಸುವುದಾಗಿ ಇರಾನ್ ಪ್ರತಿಜ್ಞೆ ಮಾಡಿದ್ದು, ಈ ಬೆನ್ನಲ್ಲೇ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಟ್ರುತ್ ಸೋಶಿಯಲ್ನಲ್ಲಿ ಬರೆದಿರುವ ಅವರು, ಇರಾನ್ ಮೇಲೆ ಅತ್ಯಂತ ಕಠಿಣವಾಗಿ, ಹಿಂದೆಂದೂ ನೋಡಿರದ ಬಲಪ್ರಯೋಗದಿಂದ ದಾಳಿ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಅವರು ಅವಕಾಶ ನೀಡದೇ ಇರುವುದು ಉತ್ತಮ ಎಂದು ತಿಳಿಸಿದ್ದಾರೆ.
ಇರಾನ್ ವಿರುದ್ಧ ಮಿಲಿಟರಿ ಕ್ರಮ ಅಗತ್ಯವಾಗಿತ್ತು. ಇದು ಅಮೆರಿಕನ್ ಜನರನ್ನು ರಕ್ಷಿಸಲು ಮಾಡಲಾಗಿದೆ ಎಂದು ಹೇಳಿರುವ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ಮಾತುಕತೆ ನಡೆಸುವುದು ಈಗ ಹೆಚ್ಚು ಸುಲಭ ಎಂದು ಹೇಳಿದರು.
ಖಮೇನಿ ಹತ್ಯೆಯು ಇರಾನ್ ಜನರಿಗೆ ಮಾತ್ರವಲ್ಲ ಅಮೆರಿಕನ್ನರಿಗೆ, ಪ್ರಪಂಚದಾದ್ಯಂತ ಇರುವ ಅನೇಕ ದೇಶಗಳ ಜನರಿಗೆ ದೊರೆತ ನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.



