March 3, 2026
Tuesday, March 3, 2026
spot_img

CINE | ಹೊಸ ಅವತಾರದಲ್ಲಿ ಸಿಗಂ: ವಿಶ್ವನಾಥ್ ಆಂಡ್ ಸನ್ಸ್ ಕಥೆ ಹೇಳೋಕೆ ಹೊರಟ ಸೂರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ಸೂರ್ಯ ಅಭಿನಯದ ‘ಸೂರ್ಯ 46’ ಚಿತ್ರಕ್ಕೆ ಅಧಿಕೃತವಾಗಿ ‘ವಿಶ್ವನಾಥ್ ಆಂಡ್ ಸನ್ಸ್’ ಎಂಬ ಶೀರ್ಷಿಕೆ ಸಿಕ್ಕಿದೆ. ನಿರ್ಮಾಪಕರು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ, ಇದೇ ವರ್ಷದ ಜುಲೈನಲ್ಲಿ ದೇಶಾದ್ಯಂತ ರಿಲೀಸ್ ಆಗುವುದಾಗಿ ಘೋಷಿಸಿದ್ದಾರೆ.

ಪೋಸ್ಟರ್‌ನಲ್ಲಿ ಸೂರ್ಯ ಮಗುವನ್ನು ಹಿಡಿದಿರುವ ದೃಶ್ಯ ಗಮನಸೆಳೆಯುತ್ತಿದೆ. ಆಕ್ಷನ್ ಪಾತ್ರಗಳಿಂದ ವಿಭಿನ್ನವಾಗಿ, ಇಲ್ಲಿ ಅವರು ಫ್ಯಾಮಿಲಿ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಚಿತ್ರವನ್ನು ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ. ಸಂಬಂಧಗಳು ಮತ್ತು ಬದುಕಿನ ಉದ್ದೇಶ ಸುತ್ತ ಕಥೆ ಸಾಗಲಿದೆ ಎಂದು ತಂಡ ತಿಳಿಸಿದೆ. ನಾಯಕಿಯಾಗಿ ಮಮಿತಾ ಬೈಜು ನಟಿಸಿದ್ದಾರೆ.

ಇದಲ್ಲದೆ ರವೀನಾ ಟಂಡನ್ ಹಾಗೂ ರಾಧಿಕಾ ಶರತ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಸೂರ್ಯ, ಆರ್ ಜೆ ಬಾಲಾಜಿ ನಿರ್ದೇಶನದ ‘ಕರುಪ್ಪು’ ಆಕ್ಷನ್ ಡ್ರಾಮಾಕ್ಕೂ ಸಜ್ಜಾಗಿದ್ದಾರೆ. 2026 ಸೂರ್ಯಗೆ ಮಹತ್ವದ ವರ್ಷವಾಗುವ ನಿರೀಕ್ಷೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !