March 3, 2026
Tuesday, March 3, 2026
spot_img

ಗಲ್ಫ್ ರಾಷ್ಟ್ರಗಳಿಗೆ ಉಕ್ರೇನ್ ಹೊಸ ಆಫರ್: ರಷ್ಯಾ ನಡುವಿನ ಕದನ ವಿರಾಮಕ್ಕೆ ಸಾಥ್ ನೀಡಿದರೆ ಡ್ರೋನ್ ತಜ್ಞರ ರವಾನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್-ಇರಾನ್-ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೊಸ ಆಫರ್ ಮುಂದಿಟ್ಟಿದ್ದು, ಉಕ್ರೇನ್-ರಷ್ಯಾ ನಡುವಿನ ಕದನ ವಿರಾಮ ಸಾಧಿಸಲು ಗಲ್ಫ್ ರಾಷ್ಟ್ರಗಳು ನೆರವಾದರೆ, ಪಶ್ಚಿಮ ಏಷ್ಯಾ ದೇಶಗಳಿಗೆ ಇರಾನ್ ಡ್ರೋನ್ ತಡೆಯುವ ರಕ್ಷಣಾ ತಜ್ಞರನ್ನು ಕಳುಹಿಸಲು ಸಿದ್ಧವಿದ್ದೇವೆ ಎಂದಿದ್ದಾರೆ.

ಇದೇ ವೇಳೆ ರಷ್ಯಾದೊಂದಿಗೆ ಅಬುಧಾಬಿಯಲ್ಲಿ ನಡೆಯಲಿರುವ ಶಾಂತಿ ಮಾತುಕತೆಗಳು ಎಂದಿನಂತೆ ಮುಂದುವರಿಯಬೇಕು ಎಂದು ಕೂಡಾ ಝೆಲೆನ್ಸ್ಕಿ ಆಗ್ರಹಿಸಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ದೀರ್ಘಕಾಲದ ಯುದ್ಧ ಮುಂದುವರಿದರೆ, ಉಕ್ರೇನ್‌ನಿಂದ ರಷ್ಯಾದ ದಾಳಿಗಳನ್ನು ತಡೆಯಲು ಬಳಸುತ್ತಿರುವ ಪ್ರಮುಖ ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾ.೫ ಹಾಗೂ ೮ ನಡುವೆ ಅಬುಧಾಬಿಯಲ್ಲಿ ಮಾತುಕತೆ ಆಯೋಜಿಸಲಾಗಿದೆ. ಈ ನಡುವೆ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ಆದರೂ ಸಭೆ ನಡೆಯಬೇಕು. ಇದು ನಮಗೆ ಮುಖ್ಯವಾಗಿದೆ. ನಾವು ಈ ಸಭೆಯನ್ನು ಬೆಂಬಲಿಸುತ್ತೇವೆ ಎಂದು ಝೆಲೆನ್ಸ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !