March 5, 2026
Thursday, March 5, 2026
spot_img

ಇನ್ಮುಂದೆ ಈ ರೀತಿ ಆಗಲ್ಲ: ಅಶ್ಲೀಲ ಸಾಹಿತ್ಯದ ಹಾಡುಗಳಿಗೆ ‘ನೋ’ ಎಂದ ಶ್ರೇಯಾ ಘೋಷಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ‘ಚಿಕ್ನಿ ಚಮೇಲಿ’ ರೀತಿಯ ಹಾಡುಗಳನ್ನು ಇನ್ನು ಮುಂದೆ ಹಾಡುವುದಿಲ್ಲ ಎಂದು ಅವರು ಹೇಳಿದ ನಂತರ ಕೆಲವರು ಟ್ರೋಲ್ ಮಾಡಿದ್ದರು. ಆದರೆ ಈಗ ಆ ಟೀಕೆಗಳಿಗೆ ಶ್ರೇಯಾ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಶ್ರೇಯಾ, ಸಿನಿಮಾಗಳಲ್ಲಿ ಮಹಿಳೆಯರನ್ನು ಅತಿಯಾಗಿ ಲೈಂಗಿಕವಾಗಿ ಬಿಂಬಿಸುವ ಸಾಹಿತ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ‘ಚಿಕ್ನಿ ಚಮೇಲಿ’ ಹಾಡು ಹಿಟ್ ಆದ ನಂತರ ಇದೇ ರೀತಿಯ ಹಲವು ಹಾಡುಗಳ ಆಫರ್‌ಗಳು ಬಂದವು. ಒಂದು ಬಾರಿ ಅತಿಯಾಗಿ ಅಶ್ಲೀಲವಾಗಿದ್ದ ಸಾಹಿತ್ಯವಿರುವ ಹಾಡನ್ನು ಹಾಡಲು ಕೇಳಿದ್ದರು. ಅದನ್ನು ಕೇಳುತ್ತಿದ್ದಂತೆಯೇ ನನಗೆ ಅಸಹಜ ಅನುಭವವಾಗಿ, ತಕ್ಷಣವೇ ನಿರಾಕರಿಸಿದ್ದೆ ಎಂದು ಅವರು ಹೇಳಿದರು.

ಇದನ್ನೂ ಓದಿ:

2012ರಲ್ಲಿ ಬಿಡುಗಡೆಯಾದ ಅಗ್ನೀಪತ್ ಸಿನಿಮಾದ ‘ಚಿಕ್ನಿ ಚಮೇಲಿ’ ಹಾಡಿನ ಬಗ್ಗೆ ಮಾತನಾಡಿದ ಅವರು, ಆ ಸಮಯದಲ್ಲಿ ಹಾಡಿನ ಅರ್ಥದ ಬಗ್ಗೆ ಹೆಚ್ಚಿನ ಗಮನ ಇರಲಿಲ್ಲ ಎಂದು ಒಪ್ಪಿಕೊಂಡರು. ಆರಂಭದಲ್ಲಿ ಆ ಹಾಡಿನ ಸಾಹಿತ್ಯ ಇನ್ನಷ್ಟು ಗಾಢವಾಗಿತ್ತು, ನಂತರ ಅದನ್ನು ಸ್ವಲ್ಪ ಬದಲಾಯಿಸಲಾಗಿತ್ತು ಎಂದರು.

ಸಾಮಾಜಿಕ ಜಾಲತಾಣದಲ್ಲಿ ಕೆಲವರು ‘ನೀವು ಈಗಲೂ ಸಂಗೀತ ಕಾರ್ಯಕ್ರಮಗಳಲ್ಲಿ ಅದೇ ಹಾಡನ್ನು ಹಾಡುತ್ತೀರಲ್ಲವೇ?’ ಎಂದು ಪ್ರಶ್ನಿಸಿದಾಗ, ಅದಕ್ಕೆ ಉತ್ತರಿಸಿದ ಶ್ರೇಯಾ, ಆ ಹಾಡಿನ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು. ಆದರೆ ಈಗ ತಮ್ಮ ದೃಷ್ಟಿಕೋನ ಬದಲಾಗಿದೆ. ಇನ್ನು ಮುಂದೆ ಅಶ್ಲೀಲ ಅರ್ಥ ನೀಡುವ ಸಾಹಿತ್ಯವಿರುವ ಹಾಡುಗಳನ್ನು ರೆಕಾರ್ಡ್ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !