ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಅವುಗಳ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಹಡಗುಗಳಿಗೆ ಇನ್ನುಮುಂದೆ ಜಾಗವಿಲ್ಲ ಎಂದು ಇರಾನ್ ಖಡಕ್ ಸಂದೇಶ ನೀಡಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (IRGC) ಈ ನಿರ್ಧಾರವನ್ನು ಇರಾನಿನ ಸರ್ಕಾರಿ ಮಾಧ್ಯಮ IRIB ವರದಿ ಮಾಡಿದೆ.
ಅಂತಾರಾಷ್ಟ್ರೀಯ ಕಾನೂನು ಮತ್ತು ಸಂಬಂಧಿತ ನಿರ್ಣಯಗಳಿಗೆ ಅನುಗುಣವಾಗಿ, ಯುದ್ಧದ ಸಮಯದಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಕ್ಕನ್ನು ಇರಾನ್ ಕಾಯ್ದಿರಿಸಿದೆ. ಜಲಮಾರ್ಗದಲ್ಲಿ ಸಂಚರಿಸುವ ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಅವರನ್ನು ಬೆಂಬಲಿಸುವ ಯಾವುದೇ ಹಡಗುಗಳು ಹೊಡೆದು ಹಾಕುತ್ತೇವೆ ಎಂದು IRGC ಹೇಳಿದೆ.
ಹಾರ್ಮುಜ್ ಜಲಸಂಧಿಯು ಪಶ್ಚಿಮ ಏಷ್ಯಾ ಭಾಗದಲ್ಲಿ ಇರಾನ್ ಮತ್ತು ಓಮನ್ ನಡುವಿನ ಸಮುದ್ರ ಭಾಗ. ಇದು ಪರ್ಷಿಯನ್ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರವನ್ನು ಇದು ಸಂಪರ್ಕಿಸುತ್ತದೆ. ಬಹಳ ಕಿರಿದಾಗಿರುವ ಈ ಜಲಸಂಧಿಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಹಡಗುಗಳು ಸಾಗುತ್ತವೆ. ಗಲ್ಫ್ ರಾಷ್ಟ್ರಗಳ ತೈಲ ನೌಕೆಗಳು ಬೇರೆ ದೇಶಗಳನ್ನು ತಲುಪಬೇಕಾದರೆ ಇಲ್ಲಿಂದಲೇ ಹೊರಗೆ ಹೋಗಬೇಕು.
ಅಮೆರಿಕ ಮತ್ತು ಇಸ್ರೇಲ್ ಶನಿವಾರ ಇರಾನ್ ಮೇಲೆ ಜಂಟಿಯಾಗಿ ದಾಳಿ ಆರಂಭಿಸಿದಾಗಿನಿಂದ ಈ ಜಲಸಂಧಿಗೆ ತಡೆ ಬಿದ್ದಿದೆ. ಈ ಮಾರ್ಗದಲ್ಲಿ ಶೇ. 90ರಷ್ಟು ಹಡಗುಗಳ ಸಾಗಣೆ ಕಡಿಮೆ ಆಗಿದೆ.



