ಬೇರೆಯವರ ಜತೆ ಜಗಳ ಆಡಿ ಮರೆತುಬಿಡಬಹುದು. ಬಾಯಿಗೆ ಬಂದಂತೆ ಬೈಸಿಕೊಂಡು, ಬಾಯಿಗೆ ಬೈದಂತೆ ಬೈದು ಆ ಜಗಳ ಮುಗಿಸಿ ಮೂವ್ ಆನ್ ಆಗಬಹುದು. ಆದರೆ ನಮ್ಮವರ ಜತೆಗೇ ಜಗಳ ಮಾಡುವ ಪರಿಸ್ಥಿತಿ ಬಂದರೆ? ಮನೆಯಲ್ಲಿರುವ ಪೋಷಕರು, ಅತ್ತೆಮಾವ ಅಥವಾ ಅಣ್ಣ ತಂಗಿ, ಅತ್ತಿಗೆ ನಾದಿದಿ, ಮೈದುನ, ಗಂಡ ಹೀಗೆ ಯಾರೇ ಆಗಿರಲಿ ಸಣ್ಣ ಪುಟ್ಟ ಕಿರಿಕಿರಿ ಶುರುವಾಗಿದ್ದು, ಕಿತ್ತಾಡೇ ಬಿಡಬೇಡು ಅಂದುಕೊಳ್ತಿದ್ರೆ ಈ ನಾಲ್ಕು ವಿಷಯಗಳನ್ನು ಗಮನಿಸಿ..
ಮೊದಲು ನೀವು ಯಾವ ವಿಷಯಕ್ಕಾಗಿ ಕಿತ್ತಾಡೋಕೆ ರೆಡಿ ಆಗಿದ್ದೀರೋ ಆ ವಿಷಯ ನಿಜವಾಗಿಯೂ ಕಿತ್ತಾಡೋ ವಿಷಯವಾ? ಸಣ್ಣ ಅಡ್ಜಸ್ಟ್‌ಮೆಂಟ್‌ನಿಂದ ಸರಿ ಹೋಗಬಹುದಾ? ಆಲೋಚಿಸಿ.
ಸಮಸ್ಯೆ ಹಾಗೂ ವ್ಯಕ್ತಿಯನ್ನು ಬೇರೆ ಬೇರೆ ಎಂದು ಪರಿಗಣಿಸಿ. ಎಂದೂ ನಿಮ್ಮ ಮೇಲೆ ರೇಗದ ಅತ್ತಿಗೆ ಸಣ್ಣ ವಿಷಯಕ್ಕೆ ರೇಗಿದರು ಎಂದರೆ ಅತ್ತಿಗೆ ಕೆಟ್ಟವರಲ್ಲ, ರೇಗಿದ್ದಷ್ಟೆ ಸರಿಯಲ್ಲ. ಅದನ್ನು ಕುಳಿತು ಮಾತನಾಡಿ ಸರಿ ಮಾಡಿಕೊಳ್ಳಿ.
ಕೂಲ್ ಆಗಿ ಮಾತನಾಡೋಕೆ ಆಗದಷ್ಟು ಕೋಪ ಇದ್ದರೆ ಮಾತನಾಡಬೇಡಿ. ಆ ಜಾಗದಿಂದ ಎದ್ದುಹೋಗಿ, ಸಮಯ ಕೊಡಿ ಆಮೇಲೆ ಮಾತಾಡಿ. ನಿಮ್ಮ ತಲೆಯಲ್ಲಿ ಈ ವಿಷಯ ಖಾಯಂ ಆಗಿ ನೆಲೆಸಲಿ. ನೀವು ಮಾತನಾಡುತ್ತಿರೋದು ಸಮಸ್ಯೆ ಬಗೆಹರಿಸೋಕೆ, ವಾದ ಮಾಡೋಕಲ್ಲ.



