March 7, 2026
Saturday, March 7, 2026
spot_img

ಅಯೋಧ್ಯೆಯಲ್ಲಿ 35 ಕೋಟಿ ರೂ. ಮೌಲ್ಯದ ಭೂಮಿ ಖರೀದಿಸಿದ ಬಿಗ್ ಬಿ: ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ಅಯೋಧ್ಯೆಯಲ್ಲಿ ಮತ್ತೊಮ್ಮೆ ಭೂಮಿಯಲ್ಲಿ ಹೂಡಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ರಿಯಲ್ ಎಸ್ಟೇಟ್ ಸಂಸ್ಥೆ ‘ಹೌಸ್ ಆಫ್ ಅಭಿನಂದನ್ ಲೋಧಾ’ ದಿಂದ ಅವರು ಸುಮಾರು 35 ಕೋಟಿ ರೂಪಾಯಿ ಮೌಲ್ಯದ 2.67 ಎಕರೆ ಭೂಮಿಯನ್ನು ಖರೀದಿಸಿದ್ದಾರೆ.

ಕಂಪನಿಯ ಮಾಹಿತಿಯ ಪ್ರಕಾರ ಈ ವ್ಯವಹಾರ ಶುಕ್ರವಾರ ಪೂರ್ಣಗೊಂಡಿದ್ದು, ಎಬಿ ಕಾರ್ಪ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಯಾದವ್ ಅವರ ನೇತೃತ್ವದಲ್ಲಿ ಖರೀದಿ ಪ್ರಕ್ರಿಯೆ ನಡೆದಿದೆ. ಈ ಭೂಮಿ HoABL ಅಭಿವೃದ್ಧಿಪಡಿಸುತ್ತಿರುವ 75 ಎಕರೆ ವ್ಯಾಪ್ತಿಯ ‘ದಿ ಸರಯು’ ಎಂಬ ಲಕ್ಸುರಿ ಯೋಜನೆಗೆ ಸಮೀಪದಲ್ಲಿದೆ.

ಇದನ್ನೂ ಓದಿ:

ಇದಕ್ಕೂ ಮುನ್ನ 2024ರ ಜನವರಿಯಲ್ಲಿ ಅಮಿತಾಬ್ ಬಚ್ಚನ್ ಇದೇ ಯೋಜನೆಯೊಳಗಿನ ‘ದಿ ಸರಯು’ ಪ್ರದೇಶದಲ್ಲಿ ಭೂಮಿ ಖರೀದಿಸಿದ್ದರು. ಈಗ ಮತ್ತೊಮ್ಮೆ ಹೂಡಿಕೆ ಮಾಡುವ ಮೂಲಕ ಅಯೋಧ್ಯೆಯಲ್ಲಿ ಅವರ ಮೂರನೇ ಹಾಗೂ ಒಟ್ಟಾರೆ ನಾಲ್ಕನೇ ರಿಯಲ್ ಎಸ್ಟೇಟ್ ಹೂಡಿಕೆಯಾಗಿದೆಯೆಂದು ತಿಳಿದುಬಂದಿದೆ.

ಅಮಿತಾಬ್ ಬಚ್ಚನ್ ಮುಂಬೈ ಸಮೀಪದ ಅಲಿಬಾಗ್ ಪ್ರದೇಶದಲ್ಲಿರುವ ‘ಸೋಲ್ ಡಿ ಅಲಿಬಾಗ್’ ಯೋಜನೆಯಲ್ಲಿ ಕೂಡ ಸುಮಾರು 10,000 ಚದರ ಅಡಿ ವಿಸ್ತೀರ್ಣದ ಪ್ಲಾಟ್ ಖರೀದಿಸಿ ಹೂಡಿಕೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !