March 7, 2026
Saturday, March 7, 2026
spot_img

ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ದಾಳಿಗೆ 300 ಮಿಲಿಯನ್ ಡಾಲರ್ ಮೌಲ್ಯದ THAAD ವ್ಯವಸ್ಥೆ ಧ್ವಂಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚುತ್ತಲ್ಲೇ ಇದ್ದು, ಅಮೆರಿಕ-ಇಸ್ರೆಲ್‌ ಜಂಟಿ ದಾಳಿಗೆ ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ.

ಒಂದು ವಾರದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಅಮೆರಿಕದ 300 ಮಿಲಿಯನ್ ಡಾಲರ್ ಮೌಲ್ಯದ ರಾಡಾರ್ ರಕ್ಷಣಾ ವ್ಯವಸ್ಥೆಯು ನಾಶವಾಗಿದೆ ಎಂದು ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಜೋರ್ಡಾನ್‌ನಲ್ಲಿರುವ ಅಮೆರಿಕದ ಥಾಡ್ (THAAD) ರಕ್ಷಣಾ ವ್ಯವಸ್ಥೆಯಲ್ಲಿ ಬಳಸುವ ಆರ್‌ಟಿಎಕ್ಸ್ ಕಾರ್ಪೊರೇಷನ್‌ನ (RTX Corp.) AN/TPY-2 ರಾಡಾರ್ ಮತ್ತು ಪೂರಕ ಉಪಕರಣಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಸುಮಾರು 300 ಮಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ವ್ಯವಸ್ಥೆಯು ಧ್ವಂಸಗೊಂಡಿದೆ ಎಂದು ವರದಿ ಹೇಳಿದೆ.

ಥಿಂಕ್ ಟ್ಯಾಂಕ್‌ನ ಮಿಲಿಟರಿ ಮತ್ತು ಪೊಲಿಟಿಕಲ್ ಪವರ್ ಕೇಂದ್ರದ ಉಪ ನಿರ್ದೇಶಕ ರಿಯಾನ್ ಬ್ರಾಬ್ಸ್ಟ್ ಕೂಡ ತಿಳಿಸಿದ್ದು, ಜೋರ್ಡಾನ್‌ನ ಥಾಡ್ ರಾಡಾರ್ ಮೇಲಿನ ದಾಳಿಯು ಇರಾನ್‌ ನಡೆಸಿರುವ ಈವರೆಗಿನ ದಾಳಿಗಳಲ್ಲಿ ಅತ್ಯಂತ ಯಶಸ್ವಿ ದಾಳಿಗಳಲ್ಲಿ ಒಂದಾಗಲಿದೆ.ಇಷ್ಟದರೂ ಅಮೆರಿಕದ ಮಿಲಿಟರಿ ಮತ್ತು ಅದರ ಪಾಲುದಾರರು ವಾಯು ಮತ್ತು ಕ್ಷಿಪಣಿ ರಕ್ಷಣಾ ಕವರೇಜ್ ಅನ್ನು ಕಾಯ್ದುಕೊಳ್ಳಲು ಸಮರ್ಥವಾಗಿರುವ ಇತರ ರಾಡಾರ್‌ಗಳನ್ನು ನಿರ್ವಹಿಸುತ್ತಿವೆ. ಒಂದು ವ್ಯವಸ್ಥೆಯನ್ನು ಕಳೆದುಕೊಳ್ಳುವುದರಿಂದ ಗಂಭೀರ ಪರಿಣಾಮವಾಗುವುದಿಲ್ಲ ಎಂದೂ ವಿವರಿಸಿದ್ದಾರೆ.

THAAD ವ್ಯವಸ್ಥೆಯನ್ನು ತನ್ನ ವ್ಯಾಪ್ತಿಯ ಕಟ್ಟಕಡೆಯ ತುದಿಯಲ್ಲಿಯೇ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದು ಕಡಿಮೆ ವ್ಯಾಪ್ತಿಯ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಯ ಬ್ಯಾಟರಿಗಳಿಗಿಂತ ಹೆಚ್ಚು ಸಂಕೀರ್ಣವಾದ ಬೆದರಿಕೆಗಳನ್ನು ತಡೆಯಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಒಂದು ವಿಶಿಷ್ಟವಾದ THAAD ಬ್ಯಾಟರಿಯು 90 ಸೈನಿಕರು, ಟ್ರಕ್-ಮೌಂಟೆಡ್ ಒಂಬತ್ತು ಲಾಂಚರ್‌ಗಳು, 48 ಇಂಟರ್‌ಸೆಪ್ಟರ್ ಕ್ಷಿಪಣಿಗಳು, ಒಂದು TPY-2 ರಾಡಾರ್, ಒಂದು ಯುದ್ಧತಾಂತ್ರಿಕ ಅಗ್ನಿ-ನಿಯಂತ್ರಣ ಮತ್ತು ಸಂವಹನ ಘಟಕ ಹಾಗೂ ಲಾಕ್ಹೀಡ್ ಮಾರ್ಟಿನ್‌ಅನ್ನು ಹೊಂದಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !