ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯಗಳ ಯುದ್ಧದಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರ ಬೆನ್ನಲ್ಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ದಿಢೀರ್ ಏರಿಕೆಯಾಗಿದ್ದು ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಗ್ಯಾಸ್ ಸರಬರಾಜು ಬಂದ್ ಆಗಿರುವ ಕಾರಣ ಹೊಟೇಲ್ ನಲ್ಲಿ ಯಾವುದೇ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ನಾಳೆಯಿಂದ (ಮಾ.10) ಹೊಟೇಲ್ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೊಟೇಲ್ ಮಾಲೀಕರ ಸಂಘ ಹೇಳಿದೆ.
ಈ ಕುರಿತು ಮಾತನಾಡಿದ ಹೊಟೇಲ್ ಅಸೋಸಿಯೇಷನ್ ನ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ , ವಾಣಿಜ್ಯ ಸಿಲಿಂಡರ್‌ಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇಂದಿನಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸರಬರಾಜು ನಿಲ್ಲಿಸಲಾಗಿದೆ. ಮೊದಲೇ ನಮಗೆ ಮುನ್ಸೂಚನೆ ನೀಡಿದ್ರೆ ಈ ರೀತಿಯ ಪರಿಸ್ಥಿತಿ ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ. ನಾವು ಬಂದ್ ಮಾಡೋದಕ್ಕೆ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ನಾಳೆ ಮಧ್ಯಾಹ್ನಕ್ಕೆ ಆಗುವಷ್ಟು ಸಿಲಿಂಡರ್ ಮಾತ್ರ ನಮ್ಮ ಹತ್ರ ಇದೆ. ಅಷ್ಟರೊಳಗೆ ಸರ್ಕಾರ ಪೂರೈಕೆ ಮಾಡದಿದ್ರೆ ಎಲ್ಲಾ ಹೊಟೇಲ್ ಗಳು ಬಂದ್ ಮಾಡಲಾಗುತ್ತೆ ಎಂದು ಹೇಳಿದ್ದಾರೆ.
ದಿಢೀರ್ ಪೂರೈಕೆ ಸ್ಥಗಿತಗೊಂಡರೆ ನಾವು ಬಂದ್ ಮಾಡದೇ ಬೇರೆ ದಾರಿ ಇಲ್ಲ. ಹೊಟೇಲ್ ಮಾಲೀಕರ ಸಂಘ ಯಾವುದೇ ಬಂದ್‌ಗೆ ಕರೆ ಕೊಟ್ಟಿಲ್ಲ. ಆದರೆ ಆಹಾರ, ತಿನಿಸುಗಳು ಇಲ್ಲದಿದ್ದರೆ ಬಂದ್ ಮಾಡಲೇಬೇಕು ಎಂದಿದ್ದಾರೆ.
ಬೆಂಗಳೂರು ಒಂದರಲ್ಲಿ ಮಾತ್ರ ಅಲ್ಲಾ ತಮಿಳುನಾಡಿನಲ್ಲೂ ಕೂಡ ಇದೇ ಸಮಸ್ಯೆ. ರಾಜ್ಯ ಸರ್ಕಾರದ ಬಳಿ ಕೇಳಿದ್ರೆ ಕೇಂದ್ರ ಸರ್ಕಾರ ಅಂತಾ ಹೇಳ್ತಾರೆ. ಅದ್ರೆ ಗ್ಯಾಸ್ ಸಿಲಿಂಡರ್ ನಲ್ಲಿ ರಾಜ್ಯ ಸರ್ಕಾರದ್ದು ಪಾಲಿದೆ. ರಾಜ್ಯ ಸರ್ಕಾರ ಇದಕ್ಕೆ ಒಂದು ಪರಿಹಾರ ಕೊಡಬೇಕು ಎಂದು ಸಂಘ ಆಗ್ರಹಿಸಿದೆ.



