ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಯುದ್ಧ ಎರಡನೇ ವಾರಕ್ಕೆ ಕಾಲಿರಿಸಿದ್ದು, ದಾಳಿ- ಪ್ರತಿದಾಳಿ ಮುಂದುವರಿದಿದೆ. ಇರಾನ್‌ನ ಮೆಹರ್‌ಬಾದ್ ಏರ್‌ಪೋರ್ಟ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇಶ್ಫಹಾನ್ ಪರಮಾಣು ಕೇಂದ್ರ ಗುರಿಯಾಗಿಸಿಕೊಂಡು 80 ಫೈಟರ್ ಜೆಟ್‌ಗಳ ಮೂಲಕ ವೈಮಾನಿಕ ದಾಳಿ ನಡೆಸಲಾಗಿದೆ. ಜತೆಗೆ ಲೆಬನಾನ್‌ನ ಹೆಜ್ಬೊಲ್ಲಾಪಡೆಯ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಇದರ ನಡುವೆ ಡೊನಾಲ್ಡ್ ಟ್ರಂಪ್, ಅಮೆರಿಕ ಮತ್ತು ಇಸ್ರೇಲ್ ನಿರಂತರ ಸಂಪರ್ಕದಲ್ಲಿದ್ದೇವೆ.ಯುದ್ಧದ ಅಂತಿಮ ನಿರ್ಧಾರ ನನ್ನದಾಗಿರುತ್ತದೆ. ಸರಿಯಾದ ಸಮಯ ನೋಡಿಕೊಂಡು ನಾನು ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ .
ಒಂದು ವೇಳೆ ಅಮೆರಿಕ ಇರಾನ್ ಮೇಲೆ ದಾಳಿ ಮಾಡದಿದ್ದರೆ, ಇರಾನ್ ಇಸ್ರೇಲ್ ಅನ್ನು ಸಂಪೂರ್ಣವಾಗಿ ನಾಶ ಮಾಡುತ್ತಿತ್ತು. ಇಸ್ರೇಲ್ ಅನ್ನು ನಕ್ಷೆಯಿಂದ ಅಳಿಸಲು ಸಂಚು ರೂಪಿಸಿದ್ದ ದೇಶವನ್ನೇ ಈಗ ನಾವು ನಾಶಪಡಿಸಿದ್ದೇವೆ. ಇರಾನ್ ಸಂಪೂರ್ಣವಾಗಿ ಶರಣಾಗುವವರೆಗೂ ಈ ದಾಳಿ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶರಣಾಗುವ ಮಾತೇ ಇಲ್ಲ
ಇತ್ತ ಇಸ್ರೇಲ್ – ಅಮೆರಿಕ ದಾಳಿಗೆ ಹೆದರಿ ಶರಣಾಗುವ ಮಾತೇ ಇಲ್ಲ. ದೇಶದ ಸಾರ್ವಭೌಮತ್ವ ಕಾಯ್ದುಕೊಳ್ಳುವುದು ನಮ್ಮ ಹಕ್ಕಾಗಿದೆ. ಇರಾನಿಯನ್ನರು ಶರಣಾಗುತ್ತಾರೆ ಎಂಬುದು ಶತ್ರುಗಳ ಕನಸಾಗಿ ಉಳಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ತಿರುಗೇಟು ನೀಡಿದ್ದಾರೆ.



