ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಪ್ರಮುಖ ಡಿಸೈನ್ ಸಾಫ್ಟ್‌ವೇರ್ ಕಂಪನಿಯಾದ ಅಡೋಬ್‌ನ ದೀರ್ಘಕಾಲದ ಸಿಇಒ ಶಾಂತನು ನಾರಾಯಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸುಮಾರು ಎರಡು ದಶಕಗಳ ಕಾಲ ಕಂಪನಿಯನ್ನು ಮುನ್ನಡೆಸಿದ ಬಳಿಕ ಹೊಸ ನಾಯಕತ್ವಕ್ಕೆ ಅವಕಾಶ ನೀಡಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವೇಗವಾಗಿ ನಡೆಯುತ್ತಿರುವ ಬದಲಾವಣೆಗಳ ನಡುವೆಯೇ ಸಂಸ್ಥೆಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಹೈದರಾಬಾದ್ ಮೂಲದ ಶಾಂತನು ನಾರಾಯಣ್ ಹೊಸ ಸಿಇಒ ನೇಮಕವಾಗುವವರೆಗೂ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಬಳಿಕ ಅವರು ಅಡೋಬ್ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮುಂದಿನ ಸಿಇಒ ಆಯ್ಕೆ ಮಾಡಲು ಅಡೋಬ್ ಸ್ವತಂತ್ರ ನಿರ್ದೇಶಕ ಫ್ರಾಂಕ್ ಕ್ಯಾಲ್ಡೆರೊನಿ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಲಾಗಿದೆ. ಕಂಪನಿಯ ಒಳಗಿನವರೂ ಸೇರಿದಂತೆ ಹೊರಗಿನ ಅಭ್ಯರ್ಥಿಗಳನ್ನೂ ಪರಿಗಣಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಈ ಸಮಿತಿಗೆ ನೀಡಲಾಗಿದೆ.



