ಪ್ರಕೃತಿಯಲ್ಲಿ ದೊರೆಯುವ ಕೆಲವು ಹೂವುಗಳು ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತವೆ. ಅವುಗಳಲ್ಲಿ ಶಂಖ ಪುಷ್ಪ (Butterfly Pea) ಹೂವು ವಿಶೇಷ ಸ್ಥಾನ ಹೊಂದಿದೆ. ಈ ಹೂವಿನಿಂದ ತಯಾರಿಸುವ ನೀಲಿ ಬಣ್ಣದ ಚಹಾ ಕೇವಲ ಆಕರ್ಷಕವಾಗಿರೋದಿಲ್ಲ, ದೇಹಕ್ಕೆ ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತವೆ. ಅವು ಏನೆಲ್ಲಾ ಅಂತ ನೋಡೋಣ ಬನ್ನಿ.
ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ: ಶಂಖ ಪುಷ್ಪ ಚಹಾ ಮೆದುಳಿನ ಚಟುವಟಿಕೆಯನ್ನು ಉತ್ತೇಜಿಸಿ ನೆನಪಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಇದು ಉತ್ತಮ.
ಆಂಟಿಆಕ್ಸಿಡೆಂಟ್ ಶಕ್ತಿ: ಈ ಚಹಾದಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ದೇಹದ ಹಾನಿಕರ ಅಂಶಗಳನ್ನು ದೂರ ಮಾಡಿ ಆರೋಗ್ಯವನ್ನು ಕಾಪಾಡುತ್ತವೆ.
ಇದನ್ನೂ ಓದಿ:
ಒತ್ತಡ ಕಡಿಮೆ ಮಾಡುತ್ತದೆ: ನಿತ್ಯ ಜೀವನದ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುವ ಗುಣ ಈ ಚಹಾಗೆ ಇದೆ.
ತ್ವಚೆ ಮತ್ತು ಕೂದಲಿಗೆ ಲಾಭ: ಶಂಖ ಪುಷ್ಪ ಚಹಾ ತ್ವಚೆ ಹೊಳಪು ಹೆಚ್ಚಿಸಿ, ಕೂದಲು ಬಲವಾಗಲು ಸಹ ಸಹಾಯಕ.
ತೂಕ ಇಳಿಕೆಗೆ ಸಹಾಯಕ: ಮೆಟಾಬಾಲಿಸಂ ಹೆಚ್ಚಿಸಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಈ ರೀತಿಯಾಗಿ ಶಂಖ ಪುಷ್ಪ ಚಹಾ ಆರೋಗ್ಯಕರ ಮತ್ತು ನೈಸರ್ಗಿಕ ಪಾನೀಯವಾಗಿದ್ದು, ದಿನಚರಿಯಲ್ಲಿ ಸೇರಿಸಿಕೊಂಡರೆ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.



