March 18, 2026
Wednesday, March 18, 2026
spot_img

ಪಾಕಿಸ್ತಾನಕ್ಕೆ ಹೊಡೆತ ಕೊಟ್ಟ ಯುದ್ಧ: ಈ ಬಾರಿ ಸಂಭ್ರಮದ ಗಣರಾಜ್ಯೋತ್ಸಕ್ಕೆ ಬಿತ್ತು ಬ್ರೇಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಇಡೀ ಜಗತ್ತಿಗೆ ಹೊಡೆತ ಬಿದ್ದಿದ್ದು, ಇದರಿಂದ ಪಾಕಿಸ್ತಾನ ಕೂಡ ಹೊರತಲ್ಲ. ಈಗಾಗಲೇ ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತಿರುವ ಪಾಕ್ ಗೆ ಈ ಯುದ್ಧ ಮತ್ತೆ ಮತ್ತೆ ಏಟು ನೀಡುತ್ತಿದೆ. ಇದರಿಂದಾಗಿ ಪಾಕ್ ಈ ಬಾರಿ ಗಣರಾಜ್ಯೋತ್ಸವನ್ನು ಸಂಭ್ರಮದಲ್ಲಿ ಆಚರಿಸದಿರಲು ನಿರ್ಧರಿಸಿದೆ.

ಮಾರ್ಚ್ 23ರಂದು ಪಾಕಿಸ್ತಾನದಲ್ಲಿ ‘ಪಾಕಿಸ್ತಾನ ದಿನಾಚರಣೆ’ ಎಂದು ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಹಣ ಹಾಗೂ ಇಂಧನದ ಬಿಕ್ಕಟ್ಟಿನಿಂದ ದಿವಾಳಿಯಾಗಿದ್ದು, ಎಲ್ಲಾ ರೀತಿಯ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

ಈ ಕುರಿತು ಖುದ್ದು ಪಾಕಿಸ್ತಾನ ಸರಕಾರ ತನ್ನ ಜನರಿಗೆ ಮಾಹಿತಿ ನೀಡಿದ್ದು, ಯಾವುದೇ ರೀತಿಯ ಸಂಭ್ರಮ ಬೇಡ. ಸರಳವಾಗಿ ಆಚರಿಸಿ ಮನೆಗೆ ತೆರಳಿ ಎಂದು ತಿಳಿಸಿದೆ. ಯುದ್ಧದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಮೆರವಣಿಗೆಯನ್ನು ರದ್ದುಗೊಳಿಸಿದ್ದು, ಯಾವುದೇ ಸಮಾರಂಭಗಳಿರುವುದಿಲ್ಲ. ಯುದ್ಧ ಸಾಹಸಗಳ ಪ್ರದರ್ಶನ ಕೂಡ ಇರುವುದಿಲ್ಲ ಎಂದು ತಿಳಿಸಿದೆ.

ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೇವಲ ಸರಳ ರೀತಿಯಲ್ಲಿ ಧ್ವಜಾರೋಹಣ ಮಾಡುವಂತೆ ಸೂಚಿಸಿದ್ದು, ಖುದ್ದು ಪ್ರಧಾನಿ ಕೂಡ ಸರಳ ಧ್ವಜಾರೋಹಣ ಸಮಾರಂಭ ನಡೆಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !