March 20, 2026
Friday, March 20, 2026
spot_img

ಯುಗಾದಿ ಮರುದಿನವೇ ಹೊಸತೊಡಕು ಆಚರಿಸೋದ್ಯಾಕೆ? ನಾನ್‌ವೆಜ್‌ ತಿನ್ನೋಕೇ ಒಂದು ಹಬ್ಬನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುಗಾದಿ ಹಬ್ಬದ ಮರುದಿನ ಪ್ರತಿ ಊರಿನಲ್ಲಿಯೂ ಹೊಸತೊಡಕು ಸಂಭ್ರಮ ಆರಂಭವಾಗುತ್ತದೆ. ನಾನ್‌ವೆಜ್‌ ತಯಾರಿಸಿ ತಿನ್ನೋದಕ್ಕೂ ಯಾರಾದ್ರೂ ಹಬ್ಬ ಮಾಡ್ತಾರಾ? ಇದರ ಹಿನ್ನೆಲೆ ಏನು? ಇಲ್ಲಿದೆ ಡೀಟೇಲ್ಸ್‌..

ಹೊಸ ತೊಡಕು ಯುಗಾದಿ ಹಬ್ಬದ ಮರುದಿನ ಆಚರಿಸುವ ಕರ್ನಾಟಕದ ಸಾಂಪ್ರದಾಯಿಕ ಹಬ್ಬ ಇದಾಗಿದೆ. ಕರ್ನಾಟಕದ ಹಲವೆಡೆ ಇದನ್ನು “ವರ್ಷದ ತೊಡಕು” ಅಥವಾ “ಹೊಸತೊಡಕು” ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಹಿಂದೆಲ್ಲಾ ಹಳ್ಳಿಗಳಲ್ಲಿ ಯುಗಾದಿ ಹಬ್ಬದ ಮರುದಿನ ಕಾಡುಗಳಿಗೆ ತೆರಳಿ ಪ್ರಾಣಿಗಳನ್ನು ಬೇಟೆಯಾಡಿ ಮಾಂಸಹಾರ ತಯಾರಿಸಿ, ಮನೆಮಂದಿ, ಊರಜನರು ಒಟ್ಟು ಸೇರಿ ಊಟ ಸವಿದು ಈ ಹಬ್ಬವನ್ನು ಸಂಭ್ರಮಿಸುತ್ತಿದ್ದರು.

ಯುಗಾದಿಯಂದು ವೆಜ್‌ ಊಟ ಸವಿದ ನಂತರ ನೆಂಟರಿಷ್ಟರು ಇನ್ನೊಂದು ದಿನ ಉಳಿದು ಮಾಂಸಹಾರ ಸೇವನೆ ಮಾಡಿ ತಮ್ಮೂರಿಗೆ ಮರಳುತ್ತಾರೆ. ಮನೆಮಂದಿ ಅಥವಾ ಊರಿನ ಜನರೆಲ್ಲರೂ ಸೇರಿ ಒಟ್ಟಾಗಿ ಊಟ ಮಾಡಬೇಕು ಎಂದು ಈ ಸೆಲೆಬ್ರೇಷನ್‌ ಮಾಡಲಾಗುತ್ತದೆ.

ಕೆಲವು ಹಳ್ಳಿಗಳಲ್ಲಿ ಹೊಸತೊಡಕು ಸಂಭ್ರಮಕ್ಕಾಗಿಯೇ ಚೀಟಿ ಹಾಕುತ್ತಾರೆ. ಪ್ರತೀ ಮನೆಯವರು ಹಣ ಹಾಕಿ ಹೊಸತೊಡಕಿನ ದಿನ ಮಾಂಸ ಖರೀದಿ ಮಾಡಿ, ಹಬ್ಬದಡಿಗೆ ಮಾಡುತ್ತಾರೆ. ಇಡೀ ಊರೇ ಊಟವನ್ನು ಸವಿಯುತ್ತದೆ. ಎಲ್ಲರೂ ಜೊತೆಗೂಡಿ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಮಾತನಾಡುತ್ತಾರೆ.

ಹೊಸತೊಡಕು ಎಂದರೆ ‘ಹೊಸ ಆರಂಭ’ ಎಂದರ್ಥ. ಹಳೆಯ ವರ್ಷದ ಕಹಿ ನೆನಪುಗಳನ್ನು ಮರೆತು, ಹೊಸ ಭರವಸೆಯೊಂದಿಗೆ ಅಡುಗೆಯನ್ನು ಹಂಚಿಕೊಂಡು ತಿನ್ನುವ ಮೂಲಕ ವರ್ಷದುದ್ದಕ್ಕೂ ಸಮೃದ್ಧಿ ಇರಲಿ ಎಂದು ಪ್ರಾರ್ಥಿಸಲಾಗುತ್ತದೆ.

ಇದೀಗ ಸಿಟಿಗಳಲ್ಲಿ ನಾನ್‌ವೆಜ್‌ ಅಂಗಡಿಗಳ ಮುಂದೆ ಕ್ಯೂ ನಿಂತು ಮಾಂಸ ಖರೀದಿಸಿ ನೆಂಟರಿಷ್ಟರ ಜತೆ ಊಟ ಸವಿಯುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !