March 22, 2026
Sunday, March 22, 2026
spot_img

ಯುಗಾದಿ ಹಬ್ಬಕ್ಕೆ ಅಳಿಯನಿಗೆ ರಾಜ ಮರ್ಯಾದೆ: 101 ಖಾದ್ಯಗಳ ಭರ್ಜರಿ ಊಟ ಹಾಕಿಸಿದ ಅತ್ತೆಮಾವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಅಳಿಯ ಮನೆಗೆ ಬಂದಾಗ ವಿಶೇಷ ಸತ್ಕಾರ ನೀಡುವುದು ದಕ್ಷಿಣ ಭಾರತದ ಸಂಪ್ರದಾಯಗಳಲ್ಲಿ ಒಂದು. ಇದೇ ಪರಂಪರೆಯನ್ನು ಇನ್ನಷ್ಟು ಅದ್ದೂರಿಯಾಗಿ ಪ್ರದರ್ಶಿಸಿದ ಘಟನೆ ಆಂಧ್ರದ ಗೋದಾವರಿಖಾನಿಯಲ್ಲಿ ನಡೆದಿದೆ. ಪೆದ್ದಪಳ್ಳಿ ಜಿಲ್ಲೆಯ ದಂಪತಿಯೋರ್ವರು ತಮ್ಮ ಅಳಿಯನಿಗಾಗಿ ಯುಗಾದಿ ಹಬ್ಬದಂದು 101 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಮಗಳ ವಿವಾಹದ ಬಳಿಕ ಮೊದಲ ಯುಗಾದಿ ಹಬ್ಬದ ನಿಮಿತ್ತ ಅಳಿಯನನ್ನು ಮನೆಗೆ ಆಹ್ವಾನಿಸಿದ ದಂಪತಿ, ಆತಿಥ್ಯದಲ್ಲಿ ಯಾವುದೇ ಕೊರತೆಯಾಗಬಾರದೆಂದು ನಿರ್ಧರಿಸಿದ್ದರು. ಹಬ್ಬದ ಬೆಳಗ್ಗೆ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಅಳಿಯನಿಗೆ ಗೌರವ ಸಲ್ಲಿಸಿದರು.

ಊಟದ ವೇಳೆ ಅಳಿಯನ ಮುಂದೆ ಸಾಲು ಸಾಲಾಗಿ ತಟ್ಟೆಗಳನ್ನು ಇತ್ತು, ಅದರಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಬಡಿಸಲಾಗಿತ್ತು . ಸಾಂಪ್ರದಾಯಿಕ ಯುಗಾದಿ ಪಚ್ಚಡಿ, ಬಗೆಬಗೆಯ ಸಿಹಿತಿಂಡಿಗಳು, ಪಾಯಸ, ಹೋಳಿಗೆ, ವಡೆ, ಪುಳಿಯೋಗರೆ ಸೇರಿದಂತೆ ಅನೇಕ ಬಗೆಯ ಅನ್ನ, ಸಾರು ಮತ್ತು ಫ್ರೈ ಪದಾರ್ಥಗಳನ್ನು ಸಿದ್ಧಪಡಿಸಲಾಗಿತ್ತು.

ಇದನ್ನೂ ಓದಿ:

ಈ ಅದ್ದೂರಿ ಔತಣವನ್ನು ನೋಡಿ ಅಳಿಯ ಆಶ್ಚರ್ಯಚಕಿತನಾಗಿದ್ದಾನೆ. ಸ್ಥಳೀಯರು ಹಾಗೂ ನೆಂಟರು ಈ ಆತಿಥ್ಯವನ್ನು ಮೆಚ್ಚಿ, “ಇದು ನಿಜವಾದ ರಾಜಮರ್ಯಾದೆ” ಎಂದು ಹೊಗಳಿದ್ದಾರೆ.

ಸಾಮಾನ್ಯವಾಗಿ ಆಂಧ್ರದ ಗೋದಾವರಿ ಭಾಗ ಆತಿಥ್ಯಕ್ಕೆ ಪ್ರಸಿದ್ಧ. ಆದರೆ ತೆಲಂಗಾಣದ ಈ ದಂಪತಿ ಕೂಡ ಅತಿಥ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !