March 22, 2026
Sunday, March 22, 2026
spot_img

ದಿನಭವಿಷ್ಯ: ಸ್ವಲ್ಪ ತಾಳ್ಮೆ ಇರಲಿ, ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳೋಕೆ ಹೋಗ್ಬೇಡಿ

ಮೇಷ
ಯಶ ಸಾಧಿಸಲು ತಾಳ್ಮೆ ಅವಶ್ಯ. ದುಡುಕಿನ ನಡೆ ಬೇಡ. ಆರ್ಥಿಕ ಹಿನ್ನಡೆ ಬಾಧಿಸಬಹುದು. ಮನೆಯವರ ಸಂಗದಲ್ಲಿ ಸಮಾಧಾನ.
ವೃಷಭ
ದಿನವಿಡೀ ಕೆಲಸ. ವಿರಾಮ ಸಿಗದು. ಖಾಸಗಿ ವಿಚಾರದಲ್ಲಿ ಪ್ರತಿಕೂಲ ಬೆಳವಣಿಗೆ. ಅದನ್ನು ನಾಜೂಕಿನಿಂದ ಸರಿಪಡಿಸಿ. ಬಂಧು ಜತೆ ವಿರಸ.
ಮಿಥುನ
ನಿಮ್ಮ ಪಾಲಿಗೆ ಶುಭಕರ ಬೆಳವಣಿಗೆ. ಕ್ಲಿಷ್ಟವಾಗಿದ್ದ ಪರಿಸ್ಥಿತಿ ತಿಳಿಯಾಗಲಿದೆ. ಅನಿರೀಕ್ಷಿತ ದಿಕ್ಕಿನಿಂದ ಬೆಂಬಲ. ಆರ್ಥಿಕ ಉನ್ನತಿ.
ಕಟಕ
ಇತರರ ಜತೆ ವ್ಯವಹಾರದಲ್ಲಿ ಇಂದು ಎಚ್ಚರದಿಂದಿರಿ. ಮೋಸ ಹೋಗುವ ಸಾಧ್ಯತೆ. ಭಾವನಾತ್ಮಕ ಏರುಪೇರು ಉಂಟಾದೀತು.
ಸಿಂಹ
ದಿನವಿಡೀ ಏನೇನೋ ಅಡ್ಡಿಗಳು. ಮಹತ್ವದ ಕೆಲಸ ಮುಂದೂಡಿ. ದೊಡ್ಡ ಸಮಸ್ಯೆಗೆ ಸರಳ ಪರಿಹಾರವಿದೆ, ಅತ್ತ ಗಮನ ಹರಿಸಿರಿ.
ಕನ್ಯಾ
ಯಶಸ್ವೀ ದಿನ. ಮೆಚ್ಚಿನ ಹವ್ಯಾಸದಲ್ಲಿ ಆನಂದ ಪಡೆಯುವಿರಿ. ಆರೋಗ್ಯ ಸಮಸ್ಯೆ ನಿವಾರಣೆ. ಕೌಟುಂಬಿಕ ಚಿಂತೆ ಪರಿಹಾರ.
ತುಲಾ
ಕೆಲ ಸಮಯದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ. ಸೂಕ್ತ ನೆರವೂ ಸಿಗಲಿದೆ. ಮನೆಯಲ್ಲಿ ವಾಗ್ವಾದಕ್ಕೆ ಆಸ್ಪದ ನೀಡಬೇಡಿ.
ವೃಶ್ಚಿಕ
ಇಂದು ಅತೃಪ್ತಿ ತರುವ ಬೆಳವಣಿಗೆಯೇ ಹೆಚ್ಚು. ಬಂದುದನ್ನು ಸಮಾಧಾನದಿಂದ ಸ್ವೀಕರಿಸಿ. ದುಡುಕಿನ ವರ್ತನೆ ತೋರದಿರಿ.
ಧನು
ಕೆಲದಿನಗಳ ಕಷ್ಟದ ಬಳಿಕ ಖುಷಿ ತರುವ ಹೊಸ ಬೆಳವಣಿಗೆ. ಕೈಗೊಂಡ ನಿರ್ಧಾರದಲ್ಲಿ ಯಶಸ್ಸು. ಆರ್ಥಿಕ ಸ್ಥಿತಿ ಸಮಾಧಾನಕರ.
ಮಕರ
ಸಮಸ್ಯೆಯೊಂದು ಮನಃಶಾಂತಿ ಕೆಡಿಸಲಿದೆ. ಅದರ ಪರಿಹಾರವೂ ಕಷ್ಟವೆನಿಸುವುದು. ಆತುರ ಬೇಡ. ಕಾದುನೋಡುವ ತಂತ್ರ ಅನುಸರಿಸಿ.
ಕುಂಭ
ಪ್ರತಿಕೂಲ ಪರಿಸ್ಥಿತಿ ಎದುರಿಸಿದರೂ ಅದನ್ನು ನಿಮ್ಮ ಪರವಾಗಿ ಬದಲಿಸಿಕೊಳ್ಳಿ. ಕೌಟುಂಬಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳಿ.
ಮೀನ
ನೆಗೆಟಿವ್ ಚಿಂತನೆ ಬಾಧಿಸಲಿದೆ. ಸಂಗಾತಿ ಜತೆ ಜಗಳಕ್ಕೆ ಆಸ್ಪದ ನೀಡದಿರಿ. ಹೊಂದಾಣಿಕೆ ಬದುಕಿಗೊಳಿತು. ಮಕ್ಕಳ ಸಾಧನೆಯ ತೃಪ್ತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !