ಹೊಸದಿಗಂತ ಡಿಜಿಟಲ್ ಡೆಸ್ಕ್:
ಭರ್ಜರಿ ಓಪನಿಂಗ್ ಜೊತೆಗೆ ಆರಂಭವಾದ ಧುರಂಧರ್ 2 ಸಿನಿಮಾ, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಸಿಡಿಲಿನಂತೆ ಅಬ್ಬರಿಸುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ, ಬಿಡುಗಡೆ ಆದ ನಾಲ್ಕೇ ದಿನಗಳಲ್ಲಿ 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸಿನಿರಂಗದಲ್ಲಿ ಹೊಸ ದಾಖಲೆಗಳತ್ತ ಸಾಗುತ್ತಿದೆ.
ಮಾರ್ಚ್ 19ರಂದು ತೆರೆಗೆ ಬಂದ ಈ ಚಿತ್ರಕ್ಕೆ ಪ್ರೀಮಿಯರ್ ಶೋಗಳಿಂದಲೇ ಭರ್ಜರಿ ಆರಂಭ ದೊರಕಿತ್ತು. ಮೊದಲ ದಿನ 43 ಕೋಟಿ ರೂಪಾಯಿ ಗಳಿಸಿದ ಸಿನಿಮಾ, ನಂತರದ ದಿನಗಳಲ್ಲಿ 100 ಕೋಟಿಗೂ ಹೆಚ್ಚು ಸಂಗ್ರಹಿಸಿ ತನ್ನ ವೇಗವನ್ನು ಉಳಿಸಿಕೊಂಡಿದೆ. ಶುಕ್ರವಾರ ಮತ್ತು ಶನಿವಾರವೂ ಉತ್ತಮ ಗಳಿಕೆ ಕಂಡಿದ್ದು, ಭಾನುವಾರ ಮತ್ತಷ್ಟು ಹೆಚ್ಚಳವಾಗಿದೆ.
ಚಿತ್ರಕ್ಕೆ ದೇಶದಾದ್ಯಂತ ಭಾರೀ ಪ್ರಮಾಣದ ಶೋಗಳು ಲಭ್ಯವಾಗಿದ್ದು, ಪ್ರತಿ ದಿನ ಸಾವಿರಾರು ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆರಂಭಿಕ ದಿನಗಳಿಂದಲೇ ಉತ್ತಮ ಒಕ್ಕಣೆ ಪಡೆದಿರುವುದು ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ:
ವಿಶ್ವ ಮಟ್ಟದಲ್ಲೂ ‘ಧುರಂಧರ್ 2’ ಉತ್ತಮ ಪ್ರದರ್ಶನ ನೀಡುತ್ತಿದ್ದು, ಒಟ್ಟು ಕಲೆಕ್ಷನ್ ಈಗಾಗಲೇ 700 ಕೋಟಿ ರೂಪಾಯಿ ಸಮೀಪಿಸಿದೆ. ಕೆಲವು ದೇಶಗಳಲ್ಲಿ ನಿರ್ಬಂಧಗಳಿದ್ದರೂ ಕೂಡ ಚಿತ್ರದ ಗಳಿಕೆಗೆ ದೊಡ್ಡ ಮಟ್ಟದ ಪರಿಣಾಮ ಬೀರಿಲ್ಲ.
ಚಿತ್ರದ ಈ ವೇಗ ಮುಂದುವರಿದರೆ, ಒಟ್ಟಾರೆ ಕಲೆಕ್ಷನ್ 1000 ಕೋಟಿಗೂ ಮೀರಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ. ‘ಧುರಂಧರ್’ ಮೊದಲ ಭಾಗದ ಯಶಸ್ಸನ್ನು ಮೀರಿಸುವ ದಿಸೆಯಲ್ಲಿ ಮುಂದುವರಿಯುತ್ತಿರುವ ಈ ಚಿತ್ರ, ಈ ವರ್ಷದ ಅತಿ ದೊಡ್ಡ ಹಿಟ್ ಆಗುವ ಸಾಧ್ಯತೆ ಹೆಚ್ಚಾಗಿದೆ.



