March 24, 2026
Tuesday, March 24, 2026
spot_img

PSL ತೊರೆದು IPLಗೆ ಶನಕ ಎಂಟ್ರಿ: ಲಂಕಾ ಕ್ಯಾಪ್ಟನ್ ಜೇಬಿಗಿಳಿಸಿದ್ದು ಎಷ್ಟು ಕೋಟಿ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026 ಆರಂಭಕ್ಕೂ ಮುನ್ನವೇ ದೊಡ್ಡ ಬದಲಾವಣೆ ನಡೆದಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಕ್ಯಾಪ್ಟನ್ ದಾಸುನ್ ಶನಕ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡಿದೆ. ಗಾಯಗೊಂಡ ಸ್ಯಾಮ್ ಕರನ್ ಬದಲಿಗೆ ಶನಕ ಅವಕಾಶ ಪಡೆದಿದ್ದಾರೆ.

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಲಾಹೋರ್ ಕಲಂದರ್ಸ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದ ಶನಕ, ಈಗ ಆ ಟೂರ್ನಿಯಿಂದ ಹಿಂದೆ ಸರಿದು ಐಪಿಎಲ್‌ಗೆ ಸೇರ್ಪಡೆಯಾಗಿದ್ದಾರೆ. ಹಣಕಾಸಿನ ದೃಷ್ಟಿಯಿಂದಲೂ ಇದು ದೊಡ್ಡ ನಿರ್ಧಾರವಾಗಿದೆ. ಪಿಎಸ್‌ಎಲ್‌ನಲ್ಲಿ ಅವರಿಗೆ ಸುಮಾರು ₹25 ಲಕ್ಷ ಮಾತ್ರ ಸಿಗುತ್ತಿದ್ದರೆ, ಐಪಿಎಲ್‌ನಲ್ಲಿ ₹2 ಕೋಟಿ ಸಂಬಳ ದೊರೆಯುತ್ತಿದೆ.

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶನಕ, ಇದೀಗ ಬದಲಿ ಆಟಗಾರನಾಗಿ ದೊಡ್ಡ ಅವಕಾಶ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಆಡುವುದು ತಮ್ಮ ವೃತ್ತಿಜೀವನಕ್ಕೆ ಪ್ರಮುಖ ಹಂತ ಎಂದು ಶನಕ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶನಕ ಉತ್ತಮ ಪ್ರದರ್ಶನ ನೀಡಿದ್ದು, 130ಕ್ಕೂ ಹೆಚ್ಚು ಪಂದ್ಯಗಳಲ್ಲಿ 1900ಕ್ಕೂ ಹೆಚ್ಚು ರನ್ ಮತ್ತು 40ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

ಮಾರ್ಚ್ 28ರಿಂದ ಆರಂಭವಾಗಲಿರುವ ಐಪಿಎಲ್ 2026ರಲ್ಲಿ ಶನಕ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ. ರಾಜಸ್ಥಾನ್ ತಂಡಕ್ಕೆ ಅವರು ಎಷ್ಟು ಮಟ್ಟಿಗೆ ನೆರವಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !