March 26, 2026
Thursday, March 26, 2026
spot_img

ಜೇಬಿಗೆ‌ ಮತ್ತಷ್ಟು ‘ಬಿಸಿ’ಯಾದ ಬೇಸಗೆ: ನೀರಿನ ದರ 3% ಏರಿಕೆ, ಏಪ್ರಿಲ್ 1ರಿಂದಲೇ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಜನತೆಗೆ ಮತ್ತೊಂದು ಹೊರೆ ಎದುರಾಗಿದೆ. ಬೆಂಗಳೂರು ಜಲಮಂಡಳಿ ಏಪ್ರಿಲ್ 1ರಿಂದ ನೀರಿನ ದರವನ್ನು ಶೇ.3ರಷ್ಟು ಹೆಚ್ಚಿಸಲು ನಿರ್ಧರಿಸಿದೆ.

ಸಂಸ್ಥೆಯ ಸಮಿತಿಯ ತೀರ್ಮಾನದಂತೆ, ದರ ಏರಿಕೆಯನ್ನು ಕನಿಷ್ಠ ಮಟ್ಟದಲ್ಲೇ ಇಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇದರ ಪರಿಣಾಮವಾಗಿ ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ನೀರಿಗೆ ಸುಮಾರು 1 ಪೈಸೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಇದು 1.9 ಪೈಸೆವರೆಗೆ ಏರಿಕೆಯಾಗಲಿದೆ.

ಇದನ್ನೂ ಓದಿ:

ಇದರ ಜೊತೆಗೆ ಸ್ಯಾನಿಟರಿ ಚಾರ್ಜ್‌ಗಳಲ್ಲೂ ಬದಲಾವಣೆ ಮಾಡಲಾಗಿದೆ. ಬೋರ್‌ವೆಲ್ ಇರುವ ಮನೆಗಳಿಗೆ ಹೆಚ್ಚುವರಿ ₹30 ಮತ್ತು ಕೈಗಾರಿಕೆಗಳಿಗೆ ₹120 ಶುಲ್ಕ ವಿಧಿಸಲಾಗುತ್ತದೆ.

ನಗರದಲ್ಲಿ ದಿನವೂ ಲಕ್ಷಾಂತರ ಮನೆಗಳಿಗೆ ನೀರು ಪೂರೈಸುತ್ತಿರುವ ಜಲಮಂಡಳಿ, ಈ ಹೊಸ ದರಗಳನ್ನು ಮೇ ತಿಂಗಳ ಬಿಲ್‌ನಿಂದ ಜಾರಿಗೆ ತರಲು ಸಿದ್ಧವಾಗಿದೆ.

ಈ ದರ ಏರಿಕೆ ಜನಸಾಮಾನ್ಯರ ಮೇಲಿನ ಖರ್ಚು ಹೆಚ್ಚಿಸುವ ಸಾಧ್ಯತೆ ಇದ್ದು, ಬೆಲೆ ಏರಿಕೆಯ ನಡುವೆ ಮತ್ತೊಂದು ಹೊರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !