ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ನಿರೂಪಕರಾಗಿ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ಜನಪ್ರಿಯತೆ ಗಳಿಸಿದ್ದ ಮಧ್ಯಪ್ರದೇಶದ ಮಹಿಳಾ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ವಿರುದ್ಧ 2.5 ಕೋಟಿ ರೂ. ಹಗರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.
2021 ರಲ್ಲಿ ಗ್ವಾಲಿಯರ್ನ ತಹಶೀಲ್ದಾರ್ ಆಗಿದ್ದಾಗ ತೋಮರ್ ಪ್ರವಾಹದ ಸಂತ್ರಸ್ತರಿಗೆ ನೀಡಬೇಕಿದ್ದ ಪರಿಹಾರ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪವಿದ್ದು, ಈ ಹಿನ್ನೆಲೆ ನಾಕಾದಲ್ಲಿರುವ ಅವರ ಮನೆಯಲ್ಲಿ ಬಂಧಿಸಲಾಯಿತು.
ಈ ಪ್ರಕರಣ ಸಂಬಂಧ ತೋಮರ್ ವಿರುದ್ಧ ಸುಮಾರು 110 ಜನ ಸಂತ್ರಸ್ತರು ದೂರನ್ನು ದಾಖಲಿಸಿದ್ದರು. ಈ ಹಿಂದೆ ಆಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಂಡಿತ್ತು.



