August 31, 2026
Monday, August 31, 2026
spot_img

ಮೀಸಲಾತಿ ವಿವಾದಕ್ಕೆ ಶಿಲ್ಪಾ ಶೆಟ್ಟಿ ಎಂಟ್ರಿ? ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ಬಿಚ್ಚಿಟ್ಟ ಬಾಲಿವುಡ್ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಮೀಸಲಾತಿ ಕುರಿತಾದ ವಿವಾದಾತ್ಮಕ ಪೋಸ್ಟ್‌ಗೆ ಸ್ವತಃ ನಟಿಯೇ ಬ್ರೇಕ್ ಹಾಕಿದ್ದಾರೆ. ತಮ್ಮ ಹೆಸರನ್ನು ಬಳಸಿ ಸೃಷ್ಟಿಸಲಾಗಿರುವ ಈ ಸಂದೇಶವು ಸಂಪೂರ್ಣ ನಕಲಿ ಮತ್ತು ಜನರನ್ನು ಹಾದಿ ತಪ್ಪಿಸುವಂತಹದ್ದು ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿರುವ ನಟಿ, “ಇದು ಕೇವಲ ದುರುದ್ದೇಶಪೂರಿತ ಕಸ” ಎಂದು ಕರೆದಿದ್ದಾರೆ. ಅಲ್ಲದೆ, ತಮ್ಮ ಹೆಸರಿನಲ್ಲಿ ಸೃಷ್ಟಿಸಲಾಗುತ್ತಿರುವ ಇಂತಹ ಸುಳ್ಳು ಮತ್ತು ತಿರುಚಿದ ಹೇಳಿಕೆಗಳನ್ನು ಸಾರ್ವಜನಿಕರು ನಂಬಬಾರದು ಎಂದು ಅವರು ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ವೈರಲ್ ಪೋಸ್ಟ್‌ನಲ್ಲೇನಿತ್ತು?

ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ವೈರಲ್ ಆಗಿದ್ದ ಸಂದೇಶದಲ್ಲಿ, “ಮೀಸಲಾತಿಯನ್ನು ಮುಟ್ಟಬೇಡಿ. ಸಾಮಾನ್ಯ ವರ್ಗದ ವೈದ್ಯರು ಕೇವಲ ಸಾಮಾನ್ಯ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಿ. ಉಳಿದವರೆಲ್ಲರೂ ಅವರವರ ಜಾತಿಯ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಿ. ಇದನ್ನು ಕೆಲವು ವರ್ಷಗಳ ಕಾಲ ಮಾಡಿದರೆ, ಜನರೇ ಸ್ವತಃ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸುವಂತೆ ಕೇಳಲು ಪ್ರಾರಂಭಿಸುತ್ತಾರೆ. ಯಾಕಂದರೆ ಮೀಸಲಾತಿಯಿಂದ ಕೌಶಲ್ಯವನ್ನು ಪಡೆಯಲು ಸಾಧ್ಯವಿಲ್ಲ” ಎಂದು ಬರೆಯಲಾಗಿತ್ತು. ಈ ವಿವಾದಾತ್ಮಕ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !