March 28, 2026
Saturday, March 28, 2026
spot_img

ಮಹಿಳೆಯ ಮಾಂಗಲ್ಯ ಕಿತ್ತು ಓಡಿಹೋದ ಖದೀಮರು, ಒಂದೆಳೆ, ಎರಡೆಳೆ ಹಾಕೋ ಮುನ್ನ ಆಲೋಚಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಂಗಾರದ ರೇಟ್‌ ಹೆಚ್ಚಾಗಿದೆ. ಇದೀಗ ಕಳ್ಳರು ಹಣವನ್ನು ಬಿಟ್ಟು ಬಂಗಾರಕ್ಕೆ ಸ್ಕೆಚ್‌ ಹಾಕಿದ್ದಾರೆ, ಒಂದು ಕಿವಿ ಓಲೆಯನ್ನೂ ಬಿಡದೇ ಕದಿಯುತ್ತಿದ್ದಾರೆ. ಬೆಂಗಳೂರಿನ ನೆಲಮಂಗಲದಲ್ಲಿ ಹಾಡಹಗಲೇ ಮಹಿಳೆಯ ಮಾಂಗಲ್ಯ ಕಿತ್ತು ಪರಾರಿಯಾಗಿದ್ದಾರೆ.

ಗುಡೇಮಾರನಹಳ್ಳಿ ಹ್ಯಾಂಡ್‌ ಪೋಸ್ಟ್‌ ಬಳಿ ಬೇಕರಿ ಮುಂದೆ ನಿಂತಿದ್ದ ಮಹಿಳೆಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಜನರಿರುವಾಗ, ಹಾಡಹಗಲೇ ಬೇಕರಿ ಮುಂದೆ ನಿಂತಿದ್ದ ಅಂಬಿಕಾ ಸರವನ್ನು ಕದ್ದು ಓಡಿದ್ದಾರೆ. ಅದೇ ಬೇಕರಿಯಲ್ಲಿ ಜ್ಯೂಸ್‌ ಕುಡಿಯುವವರಂತೆ ನಿಂತು ನಟಿಸಿ ಸರ ಕದ್ದಿದ್ದಾರೆ.

ಸರ ಎಳೆದ ರಭಸಕ್ಕೆ ಮಹಿಳೆ ನೆಲಕ್ಕುರುಳಿದ್ದಾರೆ. ಸುಮಾರು 55 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕದ್ದೊಯ್ಯಲಾಗಿದೆ.

ಸರ ಕಳವಿನ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !