March 28, 2026
Saturday, March 28, 2026
spot_img

CINE | ಅಂತೂ ಸುಖಾಂತ್ಯ ಕಂಡಿತು ಲವ್‌ ಮಾಕ್ಟೇಲ್‌-3 ಪ್ರಕರಣ, ಎರಡೂ ಕಥೆ ಬೇರೆ ಬೇರೆಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಾರ್ಲಿಂಗ್‌ ಕೃಷ್ಣ ನಮ್ಮ ಬಳಿ ಕಥೆ ಕೇಳಿ ಆಮೇಲೆ ರಿಜೆಕ್ಟ್‌ ಮಾಡಿ, ತಮ್ಮದೇ ಸಿನಿಮಾದಲ್ಲಿ ಅದೇ ಕಥೆಯನ್ನು ಹಾಕಿಕೊಂಡಿದ್ದಾರೆ ಎಂದು ಗುರು ದೇಶಪಾಂಡೆ ಆರೋಪ ಮಾಡಿದ್ದರು. ಈ ಪ್ರಕರಣ ಇದೀಗ ಸುಖಾಂತ್ಯಗೊಂಡಿದ್ದು, ಎರಡೂ ಕಥೆ ಬೇರೆ ಬೇರೆ ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಲವ್‌ ಮಾಕ್ಟೇಲ್‌ – 3 ಸಿನಿಮಾದ ಸೆಕೆಂಡ್‌ ಹಾಫ್‌ನಲ್ಲಿ ಕೋರ್ಟ್‌ ರೂಮ್‌ ಸೀಕ್ವೆನ್ಸ್‌ ಇದೆ. ಈ ಭಾಗ ನಮ್ಮ ಕಥೆ ಎಂದು ಗುರು ಹೇಳಿದ್ದರು. ವಾದ ವಿವಾದಲ್ಲಿ ಪರ್ಸನಲ್‌ ವಿಷಯಗಳು ಹೊರಕ್ಕೆ ಬಂದಿದ್ದವು.

ಮಾರ್ಚ್ 27ರಂದು ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಕೃಷ್ಣ, ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಇನ್ನಿತರು ಹಾಜರಿದ್ದರು. ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ವಾದ ಮುಂದಿಟ್ಟಿದ್ದಾರೆ. ವಾದದ ಬಳಿಕ ಪ್ರಕರಣಕ್ಕೆ ಸುಖಾಂತ್ಯ ನೀಡಲಾಗಿದೆ. ಒಂದೇ ಕಥೆಯಿಂದ ಸ್ಪೂರ್ಥಿ ಪಡೆದ ಎರಡು ಸಿನಿಮಾಗಳು ಎಂದು ನಿರ್ಧರಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !