ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿ ವಿಷಯ ಕಡ್ಡಾಯವಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಸುತ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಗೆ ಅಂಕ ನೀಡದಿರಲು ಸರಕಾರ ಮುಂದಾಗಿದ್ದು, ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಹಿಂದಿ ಕಲಿಕೆಗೆ ನಮ್ಮ ವಿರೋಧವಿಲ್ಲ, ಆದರೆ ಪರೀಕ್ಷೆ ಕಡ್ಡಾಯವಾಗಬಾರದು. ಹೀಗಾಗಿ ರಾಜ್ಯದಲ್ಲಿ ತೃತೀಯ ಭಾಷೆ ಹಿಂದಿ ವಿಷಯವನ್ನು ಕಡ್ಡಾಯ ಮಾಡಬಾರದು ಎಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಬೆಂಬಲಿಸುವವರು ಇದ್ದಾರೆ, ವಿರೋಧಿಸುವವರು ಇದ್ದಾರೆ. ಆದರೆ ನಮ್ಮ ಉದ್ದೇಶ ಹಿಂದಿ ಕಡ್ಡಾಯವಾಗಬಾರದು ಎಂದು ತಿಳಿಸಿದರು.



