April 30, 2026
Thursday, April 30, 2026
spot_img

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚೊಚ್ಚಲ ಬಜೆಟ್​: ಬೆಂಗಳೂರು ಅಭಿವೃದ್ಧಿಗೆ 20 ಸಾವಿರ ಕೋಟಿ ಮೀಸಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ 5 ನಗರ ಪಾಲಿಕೆಗಳಿಗೆ ಶನಿವಾರ ಬಜೆಟ್ ಮಂಡಿಸಲಾಗಿದೆ. ಬೆಂಗಳೂರು ಅಭಿವೃದ್ಧಿಗೆ 20 ಸಾವಿರ ಕೋಟಿ ರೂ ಅನುದಾನ ಮೀಸಲಿಡಲಾಗಿದೆ.

ಬಿಬಿಎಂಪಿ ಬಳಿಕ ರಚನೆಯಾದ ಜಿಬಿಎಯ ಚೊಚ್ಚಲ ಬಜೆಟ್ ಆಗಿದ್ದು, 4,344 ಕೋಟಿ ರೂ.ಗಳಲ್ಲಿ ಕೆರೆ ಪುನರುಜ್ಜೀವನ, ಮೂಲಸೌಕರ್ಯ, ಘನತ್ಯಾಜ್ಯ ನಿರ್ವಹಣೆ, ಪರಿಸರ ನಿರ್ವಹಣೆ, ಹವಾಮಾನ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ಆಡಳಿತಗಾರರಾದ ಮಹೇಶ್ವರ್‌ರಾವ್ ಅಧ್ಯಕ್ಷತೆಯಲ್ಲಿ, ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಬಜೆಟ್ ಮಂಡಿಸಿದರು.

ಶುಕ್ರವಾರ 3,889 ಕೋಟಿ ರೂಪಾಯಿಗಳ ಪೂರ್ವ ನಗರ ಪಾಲಿಕೆ ಬಜೆಟ್ ಹಾಗೂ 3,426 ಕೋಟಿ ಕೇಂದ್ರ ನಗರ ಪಾಲಿಕೆ ಬಜೆಟ್ ಮಂಡಿಸಲಾಗಿತ್ತು. ಇಂದು ಉಳಿದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆಗಳ ಬಜೆಟ್ ಮಂಡಿಸಲಾಗಿದೆ.

72 ವಾರ್ಡ್ ಗಳಿಗೆ ಪ್ರತಿ ವಾರ್ಡ್‌ಗೆ 25 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದ್ದು, ಪಾದಚಾರಿ ಮಾರ್ಗ ದುರಸ್ತಿ ಮತ್ತು ಪುನರ್ನಿರ್ಮಾಣಕ್ಕಾಗಿ 18 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

ಮೂಲಸೌಕರ್ಯ ಯೋಜನೆಗಳಿಗೆ 935.56 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಕ್ಷೇತ್ರ ಮಟ್ಟದ ಅಭಿವೃದ್ಧಿಗೆ 120 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.

ಅರಣ್ಯ ಉಪಕ್ರಮಗಳಿಗೆ 10 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ನೀಡಲಾಗಿದ್ದು, ಆರೋಗ್ಯ ಕ್ಷೇತ್ರಕ್ಕೂ 1ಸರ್ವಜ್ಞನಗರ, ಬ್ಯಾಟರಾಯನಪುರದಲ್ಲಿ100 ಹಾಸಿಗೆ ಆಸ್ಪತ್ರೆಗಳು ಮತ್ತು ಉಚಿತ ಡಯಾಲಿಸಿಸ್ ಸೇವೆಗಳ ವಿಸ್ತರಣೆ ಮಾಡಲಾಗಿದೆ. ಇಂದಿರಾ ಕ್ಯಾಂಟೀನ್‌ಗಳಿಗೆ 11.15 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !