March 30, 2026
Monday, March 30, 2026
spot_img

LIFE | ಯಾವ ಕೆಲಸಕ್ಕೂ ತಡ ಅನ್ನೋದಿಲ್ಲ… ನಾವು ಶುರುಮಾಡಿದ ಟೈಮ್ ಸರಿಯಾದ ಟೈಮ್! ಏನಂತೀರಾ?

“ಇದೀಗ ಶುರು ಮಾಡಿದ್ರೆ ಲೇಟ್ ಆಗೋದಿಲ್ಲವಾ?” ಅನ್ನೋ ಒಂದು ಯೋಚನೆ ಎಷ್ಟು ಜನರನ್ನು ತಮ್ಮ ಕನಸನ್ನು ಆರಂಭಿಸೋದನ್ನೇ ತಡೆದು ಬಿಡುತ್ತೆ ಗೊತ್ತಾ?

ನಾವು ಜೀವನವನ್ನು ಒಂದು ಟೈಮ್‌ಟೇಬಲ್‌ ಹಾಗೆ ನೋಡುತ್ತೇವೆ. ಈ ವಯಸ್ಸಿನಲ್ಲಿ ಇದು ಆಗಬೇಕು, ಆ ವಯಸ್ಸಿನಲ್ಲಿ ಅದು ಆಗಬೇಕು ಎಂದುಕೊಂಡೇ ಓಡುತ್ತೇವೆ. ಆದರೆ ಜೀವನಕ್ಕೆ ಅಂಥಾ ನಿಗದಿತ ಗಡಿಯಾರವೇ ಇಲ್ಲ. ಪ್ರತಿಯೊಬ್ಬರ ಪಯಣ ವಿಭಿನ್ನ.

ಕೆಲವರು ಬೇಗ ಶುರುಮಾಡುತ್ತಾರೆ, ಕೆಲವರು ಸ್ವಲ್ಪ ತಡವಾಗಿ. ಆದರೆ ಅದರಿಂದ ಅಂತಿಮ ಫಲಿತಾಂಶ ನಿರ್ಧಾರವಾಗುವುದಿಲ್ಲ. ನಿಜವಾಗಿ ಮುಖ್ಯವಾದದ್ದು ನೀವು ಯಾವಾಗ ಆರಂಭಿಸುತ್ತೀರೋ ಅಲ್ಲ, ನೀವು ಆರಂಭಿಸುತ್ತೀರಾ ಇಲ್ಲವಾ ಅನ್ನೋದು.

ಇದನ್ನೂ ಓದಿ:

ಬಹಳ ಬಾರಿ ನಾವು “ಇದೀಗ ತಡ ಆಗಿದೆ” ಅನ್ನೋ ಕಾರಣ ಹೇಳಿಕೊಂಡು ನಮ್ಮ ಕನಸುಗಳನ್ನು ಬಿಟ್ಟುಬಿಡುತ್ತೇವೆ. ಆದರೆ ಒಂದು ಸತ್ಯ ನೀವು ಇಂದು ಶುರುಮಾಡದೇ ಇದ್ದರೆ, ನಾಳೆ ಇನ್ನೂ ಹೆಚ್ಚು ತಡವಾಗುತ್ತೆ. ಆ ಕೆಲಸ ಏನೇ ಇರಲಿ ಶುರು ಮಾಡುವ ಧೈರ್ಯ ಇಟ್ಟುಕೊಳ್ಳಿ.

ಆರಂಭಕ್ಕೆ ಪರ್ಫೆಕ್ಟ್ ಸಮಯ ಎನ್ನುವುದು ಇಲ್ಲ. ನಾವು ತೆಗೆದುಕೊಳ್ಳುವ ನಿರ್ಧಾರವೇ ಅದನ್ನು ಪರ್ಫೆಕ್ಟ್ ಮಾಡುತ್ತದೆ. ಸಣ್ಣ ಹೆಜ್ಜೆಯಾಗಿರಲಿ, ನಿಧಾನವಾಗಿರಲಿ ಆದರೂ ಅದು ಮುಂದೆ ಸಾಗುವ ದಾರಿಯೇ.

ಜೀವನದಲ್ಲಿ ತಡ ಅನ್ನೋದು ಅವಕಾಶ ಕಳೆದುಕೊಂಡಾಗ ಮಾತ್ರ. ಪ್ರಯತ್ನ ಮಾಡುವ ತನಕ ಯಾವತ್ತೂ ತಡ ಆಗೋದಿಲ್ಲ.

ಹೀಗಾಗಿ ಇನ್ನೂ ಕಾಯಬೇಡಿ.
ನೀವು ಶುರುಮಾಡುವ ಕ್ಷಣವೇ ನಿಮ್ಮ ಸರಿಯಾದ ಸಮಯ.

ಯಾಕೆಂದರೆ ಜೀವನದಲ್ಲಿ ಬದಲಾವಣೆ ಬರೋದು ಸಮಯದಿಂದಲ್ಲ…
ನಮ್ಮ ಆರಂಭದಿಂದ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !