March 31, 2026
Tuesday, March 31, 2026
spot_img

ದಿನಭವಿಷ್ಯ: ಇಂದಿಗೆ ಹಣದ ಸಮಸ್ಯೆ ಮುಗಿಯುತ್ತೆ, ನೀವೂ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ

ಮೇಷ.
ಕೆಲ ದಿನಗಳ ಚಿಂತೆ ಕಳೆದು ಹುರುಪು ತುಂಬುವ ಬೆಳವಣಿಗೆ. ಪ್ರೀತಿಪಾತ್ರರ ಸಂಗದಲ್ಲಿ ಉತ್ಸಾಹ. ಹಣದ ಬಿಕ್ಕಟ್ಟು ಪರಿಹಾರ ಕಾಣಲಿದೆ.
ವೃಷಭ
ಕ್ಷುಲ್ಲಕ ವಿಚಾರ ಬದಿಗಿಡಿ, ತಕ್ಷಣದ ಪರಿಣಾಮ ಬೀರುವ ವಿಷಯಕ್ಕೆ ಗಮನ ಕೊಡಿ. ನಿಮ್ಮ ನಿರ್ಧಾರ ಒಳ್ಳೆ ಫಲ ನೀಡಲಿದೆ, ಚಿಂತೆ ಬೇಡ.
ಮಿಥುನ
ಕಚೇರಿ ಮತ್ತು ಮನೆಯಲ್ಲಿ ಕೆಲವಾರು ವಿಷಯ ನಿಮ್ಮ ತಾಳ್ಮೆ ಕೆಣಕುವುದು. ಯಾವುದೂ ನಿಮ್ಮ ಮನಸ್ಸಿಗೆ ತೃಪ್ತಿ ತರುವಂತಿರುವುದಿಲ್ಲ.
ಕಟಕ
ಕೆಲ ವಿಷಯದಲ್ಲಿ ನಿಮ್ಮ ಧೋರಣೆ ಬದಲಿಸಿ. ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಳ್ಳಿ. ಇತರರ ಮಾತಿಗೂ ಬೆಲೆ ಕೊಡಿ. ಸಂಘರ್ಷ ತಪ್ಪಿಸಿರಿ.
ಸಿಂಹ
ಎಲ್ಲ ಕೆಲಸ ಪರಿಪೂರ್ಣವಾಗಿ ಮುಗಿಯಲಿದೆ. ನಿಮ್ಮ ಸಾಧನೆ ನಿಮಗೇ ಅಚ್ಚರಿ ತಂದೀತು. ವೈವಾಹಿಕ ಸಂಬಂಧ ಏರ್ಪಡಲಿದೆ.
ಕನ್ಯಾ
ಒತ್ತಡ ಮತ್ತು ಅತಿ ಪ್ರಯಾಸದ ದಿನ. ಯಾವ ಕಾರ್ಯವೂ ಸುಲಭದಲ್ಲಿ ಸಾಧ್ಯವಾಗದು. ತೊಡಕು, ವಾದ ಉಂಟಾಗುವುದು. ನೆಗೆಟಿವ್ ಚಿಂತನೆ ಬಿಡಿ.
ತುಲಾ
ಹಿಗ್ಗು ಕುಗ್ಗು ಎರಡನ್ನೂ ಇಂದು ಅನುಭವಿಸುವಿರಿ. ಆಪ್ತರೊಬ್ಬರು ನಿಮ್ಮ ಜತೆ ಮುನಿಸಿಕೊಂಡಾರು. ವ್ಯವಹಾರದಲ್ಲಿ ಪ್ರಗತಿ.
ವೃಶ್ಚಿಕ
ನಿಮ್ಮ ಚಿಂತೆ ಕುರಿತು ಮುಕ್ತವಾಗಿ ಹಂಚಿಕೊಳ್ಳಿ. ಹೆಗಲ ಮೇಲಿನ ಹೊರೆ ಕಡಿಮೆಯಾದೀತು. ಭಾವುಕ ಸನ್ನಿವೇಶ ಎದುರಿಸುವಿರಿ.
ಧನು
ನಿಮ್ಮ ಕುರಿತಂತೆ ಬಹಳಷ್ಟು ಮಂದಿ ಆಸಕ್ತಿ ತೋರುವರು. ನಿಮ್ಮ ಸಾಧನೆ ತೋರಿಸಲು ಮುಜುಗರ ಬೇಕಾಗಿಲ್ಲ. ಶ್ಲಾಘನೆ ಸ್ವೀಕರಿಸಿ.
ಮಕರ
ಕೆಲವರ ಜತೆ ವ್ಯವಹಾರ ಕಷ್ಟವಾದೀತು. ಆದರೆ ಅದರಿಂದ ಧೃತಿಗೆಡದಿರಿ. ಹಣದ ಕೊರತೆ ನಿವಾರಣೆ. ಆತ್ಮೀಯರಿಂದ ನೆರವು.
ಕುಂಭ
ಈ ಹಿಂದೆ ಗೊಂದಲ ಸೃಷ್ಟಿಸಿದ್ದ ವಿಷಯಗಳಲ್ಲಿ ಸ್ಪಷ್ಟತೆ ರೂಪಿಸಿಕೊಳ್ಳಿ. ಬದುಕಿನಲ್ಲಿ ಖುಷಿ ಪಡಲು ಸಾಕಷ್ಟು ವಿಷಯಗಳಿವೆ, ಅರಿಯಿರಿ. ಧನವ್ಯಯ.
ಮೀನ
ವೃತ್ತಿ ಒತ್ತಡ ಮರೆತು, ದಿನವಹಿ ಜಂಜಾಟ ಬಿಟ್ಟು ಕಾಲ ಕಳೆಯಿರಿ. ನಿರಾಳ ದಿನವನ್ನು ಗ್ರಹಗತಿ ಸೂಚಿಸುತ್ತಿದೆ. ಆತ್ಮೀಯರ ಒಡನಾಟ ಸಾಧ್ಯತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !