March 31, 2026
Tuesday, March 31, 2026
spot_img

HS ಕಪ್ ಮುಡಿಗೇರಿಸಿಕೊಂಡ ಹರಿಯಾಣ ಸ್ಟೀಲರ್ಸ್ ಅಕಾಡೆಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರಿಯಾಣ ಸ್ಟೀಲರ್ಸ್ ಅಕಾಡೆಮಿ, ಮಾರ್ಚ್ 29 ರಂದು ದಿಘಲ್‌ನ BRS ಕಬಡ್ಡಿ ಅಕಾಡೆಮಿಯಲ್ಲಿ ನಡೆದ ಪ್ರಥಮ ಹರಿಯಾಣ ಸ್ಟೀಲರ್ಸ್ ಕಪ್ (HS ಕಪ್) ಫೈನಲ್‌ನಲ್ಲಿ ಸ್ಪೋರ್ಟ್ಸ್ ಸೆಂಟರ್ ಗಿಯೋಂಗ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದಿದೆ.

ಈ ಟೂರ್ನಿಯಲ್ಲಿ ರೋಹ್ತಕ್, ಹಿಸಾರ್ ಮತ್ತು ಸೋನಿಪತ್ ಪ್ರದೇಶಗಳಿಂದ 61 ತಂಡಗಳು ಭಾಗವಹಿಸಿವೆ. ಈ ಕಪ್ ಹರಿಯಾಣ ಸ್ಟೀಲರ್ಸ್ ತಂಡದ ಕಬಡ್ಡಿಗೆ ಗ್ರಾಮೀಣ ಮಟ್ಟದಲ್ಲಿ ಸಮಗ್ರ ಅಭಿವೃದ್ಧಿ ಮಾರ್ಗವನ್ನು ನಿರ್ಮಿಸಲು ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ.
HS ಕಪ್ ಟೂರ್ನಿ 16-20 ವರ್ಷದ ಆಟಗಾರರಿಗಾಗಿ ಹಲವಾರು ಹಂತಗಳಲ್ಲಿ ನಡೆದಿತು. ಜೋನಲ್ ರೌಂಡ್‌ಗಳ ನಂತರ ಆರು ತಂಡಗಳು ಲೀಗ್ ಹಂತಕ್ಕೆ ಆಯ್ಕೆಯಾದವು, ಪ್ರತೀ ತಂಡ ಐದು ಪಂದ್ಯಗಳನ್ನು ಆಡಿತು. ಟಾಪ್ ಎರಡು ತಂಡಗಳು ಫೈನಲ್‌ಗೆ ಪ್ರವೇಶಿಸಿವೆ.

ಫೈನಲ್ ವೇಳೆ ಹಲವು ಗಣ್ಯರು ಹಾಜರಿದ್ದರು. ಇವರಲ್ಲಿ BRS ಕಬಡ್ಡಿ ಅಕಾಡೆಮಿಯ ಸ್ಥಾಪಕ ಕುಲ್ಬೀರ್ ಅಲ್ಹಾವತ್, ಫಿಟ್ನೆಸ್ ಮತ್ತು ಯುವ ಇನ್ಫ್ಲೂಯೆನ್ಸರ್ ಮೆಹ್ತಾಬ್ ಸಿಂಗ್, MDU ಕ್ರೀಡಾ ನಿರ್ದೇಶಕಿ ಶ್ರೀಮತಿ ಶಕುಂತಲಾ ಬೆನಿವಾಲ್ ಮತ್ತು ಹರಿಯಾಣ ಸ್ಟೀಲರ್ಸ್ ಮುಖ್ಯ ಕೋಚ್ ಮನ್ಪ್ರೀತ್ ಸಿಂಗ್ ಉಪಸ್ಥಿತರಿದ್ದರು. PKL ಸೀಸನ್ 11 ವಿಜೇತ ತಂಡದ ಸದಸ್ಯ ವಿನಯ ತೇವಾಥಿಯಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಟಗಾರರೊಂದಿಗೆ ಸಂವಾದ ನಡೆಸಿದರು.

ಫೈನಲ್ ಪಂದ್ಯವು ಅತ್ಯಂತ ಪೈಪೋಟಿಯಿಂದ ಕೂಡಿದ್ದು, ಎರಡೂ ತಂಡಗಳು ಶಿಸ್ತುಬದ್ಧ ಆಟ ಪ್ರದರ್ಶಿಸಿದವು. ಹರಿಯಾಣ ಸ್ಟೀಲರ್ಸ್ ಅಕಾಡೆಮಿಯು ಪಂದ್ಯದಲ್ಲಿ ಅದ್ಭುತವಾಗಿ ಪುಟಿದೇಳುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಲೀಗ್ ಹಂತದಲ್ಲೂ ಈ ತಂಡ ಸೋಲನ್ನೇ ಕಾಣದೆ ಮುನ್ನಡೆದಿರುವುದು ವಿಶೇಷ.

ಫೈನಲ್ ನಂತರ ಮಾತನಾಡಿದ ಹರಿಯಾಣ ಸ್ಟೀಲರ್ಸ್ ಮುಖ್ಯ ಕೋಚ್ ಮನ್ಪ್ರೀತ್ ಸಿಂಗ್, “ಈ HS ಕಪ್‌ನಲ್ಲಿ ನಾವು ನೋಡಿದ ಸ್ಪರ್ಧೆಯ ಮಟ್ಟ ಬಹಳ ಪ್ರೋತ್ಸಾಹಕರವಾಗಿದೆ. ರಾಜ್ಯದಲ್ಲಿ ಅಪಾರ ಪ್ರತಿಭೆ ಇದೆ. ಇಂತಹ ವೇದಿಕೆಗಳು ಯುವ ಆಟಗಾರರನ್ನು ಗುರುತಿಸಿ ಬೆಳೆಸಲು ಅತ್ಯಂತ ಮುಖ್ಯ. ಈ ಟೂರ್ನಿಯ ಮೂಲಕ ನಾವು ಯುವ ಆಟಗಾರರಿಗೆ ಅನುಭವವನ್ನು ನೀಡುವ ಹಾಗೂ ಪ್ರೊಫೆಷನಲ್ ಮಟ್ಟದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮಾರ್ಗವನ್ನು ನಿರ್ಮಿಸಲು ಬಯಸುತ್ತೇವೆ” ಎಂದರು.

₹5 ಲಕ್ಷಗಳ ಬಹುಮಾನ ಮೊತ್ತ ಹೊಂದಿದ್ದ ಈ ಟೂರ್ನಿಯಲ್ಲಿ ವಿಜೇತರು, ರನ್ನರ್‌ಅಪ್ ಮತ್ತು ಅತ್ಯುತ್ತಮ ಆಟಗಾರರನ್ನು ಗೌರವಿಸಲಾಯಿತು. ಹರಿಯಾಣ ಸ್ಟೀಲರ್ಸ್ ಅಕಾಡೆಮಿಯ ಇಶಾಂತ್ 49 ಅಂಕಗಳೊಂದಿಗೆ ‘ಬೆಸ್ಟ್ ರೈಡರ್’ ಪ್ರಶಸ್ತಿ ಪಡೆದರು. ನೌಲ್ತಾ ಶಾಲೆಯ ಹರ್ಷ್ 29 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ‘ಬೆಸ್ಟ್ ಡಿಫೆಂಡರ್’ ಪ್ರಶಸ್ತಿ ಪಡೆದರು.

ಹರಿಯಾಣ ಸ್ಟೀಲರ್ಸ್ ಕಪ್ ಕಬಡ್ಡಿಯ ಗ್ರಾಮೀಣ ಮಟ್ಟದ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿದೆ. ಈ ಟೂರ್ನಿ ಸ್ಪರ್ಧೆ, ಪ್ರತಿಭೆಗಳ ಗುರುತುಪಡಿಸುವಿಕೆ ಮತ್ತು ಅಭಿವೃದ್ಧಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ. ಈ ಯೋಜನೆ JSW ಸ್ಪೋರ್ಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡದ ಯುವ ಆಟಗಾರರಿಗೆ ದೀರ್ಘಕಾಲಿಕ ಅವಕಾಶಗಳನ್ನು ಸೃಷ್ಟಿಸುವ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !