March 31, 2026
Tuesday, March 31, 2026
spot_img

ಥಿಯೇಟರ್‌ ಮಾಲೀಕನಿಂದ 25 ಲಕ್ಷ ರೂ. ದೋಚಿದ ಐವರು ಮಹಿಳೆಯರ ಗ್ಯಾಂಗ್‌

ರಾಮನಗರದಲ್ಲಿ ಐವರು ಮಹಿಳೆಯರ ಗ್ಯಾಂಗ್‌ ಥಿಯೇಟರ್‌ ಮಾಲೀಕನಿಂದ 25 ಲಕ್ಷ ರೂ. ಸುಲಿಗೆ ಮಾಡಿದೆ.

ಈ ಬಗ್ಗೆ ರಾಮನಗರದ ಅಗ್ರಹಾರ ಬಡಾವಣೆ ನಿವಾಸಿ ರಮೇಶ್‌ (ಹೆಸರು ಬದಲಿಸಲಾಗಿದೆ) ದೂರು ನೀಡಿದ್ದಾರೆ. ಏಳು ವರ್ಷಗಳ ಹಿಂದೆ ಪತ್ನಿ ಇವರನ್ನು ಬಿಟ್ಟು ಹೋಗಿದ್ದು ಏಕಾಂಗಿ ಜೀವನ ನಡೆಸುತ್ತಿದ್ದರು.

ಇದನ್ನು ಗಮನಿಸಿದ ಮಹಿಳಾ ಗ್ಯಾಂಗ್‌ನ ಮೆಂಬರ್‌ ಒಬ್ಬರು ನಿಮ್ಮನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾರೆ. ಇತರ ಗ್ಯಾಂಗ್‌ ಮೆಂಬರ್‌ಗಳನ್ನು ಸ್ನೇಹಿತೆಯರಂದು ಪರಿಚಯ ಮಾಡಿಸಿದ್ದಾರೆ.

ಆರಂಭದಲ್ಲಿ, ಆರೋಪಿ ಮಹಿಳೆಯರು ಸಣ್ಣ ಮೊತ್ತದಲ್ಲಿ ಸುಲಿಗೆ ಮಾಡುತ್ತಿದ್ದರು. ನಂತರ ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದಾಗಲೆಲ್ಲ ಆತನ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. 500 ಗ್ರಾಂ ಚಿನ್ನಾಭರಣವನ್ನೂ ಮಹಿಳೆಯರು ಕಸಿದುಕೊಂಡಿದ್ದಾರೆ.

ಈ ಸಂಬಂಧ ಐಜೂರು ಪೊಲೀಸರು ಐದು ಮಹಿಳೆಯರ ವಿರುದ್ಧ ಬಿಎನ್‌ಎಸ್‌ನ ಇತರ ವಿಭಾಗಗಳೊಂದಿಗೆ ಸುಲಿಗೆ (ಬಿಎನ್‌ಎಸ್ 308) ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !