April 2, 2026
Thursday, April 2, 2026
spot_img

ಸಂಸತ್ ಭವನದಲ್ಲಿ ‘ಆಜಾದ್ ಭಾರತ್’ ಸಿನಿಮಾ ಪ್ರದರ್ಶನ: ಚಿತ್ರ ಕಣ್ತುಂಬಿಕೊಂಡ ನೇತಾಜಿ ಮರಿಮೊಮ್ಮಕ್ಕಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ ಭವನದಲ್ಲಿ ಇಂದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಕರ್ನಾಟಕ ಮೂಲದ ಡಾ.ರೂಪಾ ಅಯ್ಯರ್ ನಿರ್ಮಿಸಿ ನಿರ್ದೇಶಿಸಿದ ‘ಆಜಾದ್ ಭಾರತ್’ ಹಿಂದಿ ಚಲನಚಿತ್ರ ಪ್ರದರ್ಶನ ನಡೆಯಿತು.

ಸಂಸತ್ತಿನ ಗ್ರಂಥಾಲಯ ಕಟ್ಟಡದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಚಿತ್ರ ಪ್ರದರ್ಶನವನ್ನು ನೇತಾಜಿ ಮರಿಮೊಮ್ಮಗಳು ಮೀನಾಕ್ಷಿ ಲೇಖಿ, ರಾಜ್ಯಶ್ರೀ ಚೌಧುರಿ ಸಹಿತ ಸಂಸತ್ ಸದಸ್ಯರು ಮತ್ತು ಸಚಿವಾಲಯಗಳ ಅನೇಕ ಅಧಿಕಾರಿಗಳು ವೀಕ್ಷಿಸಿದರು.

ಈ ಸಂದರ್ಭ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸುಭಾಷ್ ಚಂದ್ರ ಬೋಸ್ ಅವರ ದೇಶಭಕ್ತಿ ಮತ್ತು ರಾಷ್ಟ್ರೀಯ ಮೌಲ್ಯಗಳು ಪ್ರೇರಣಾದಾಯಕವಾಗಿದ್ದು,ರಾಷ್ಟ್ರೀಯ ಏಕತೆ ಮತ್ತು ಮಾತೃಭೂಮಿಯ ಮೇಲಿನ ಭಕ್ತಿಯ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಪ್ರಮುಖವಾಗಿವೆ. ನಮ್ಮ ವೀರ ಹೋರಾಟಗಾರರ ತ್ಯಾಗವು ನಮಗೆಲ್ಲರಿಗೂ ಸ್ಫೂರ್ತಿಯಾಗಲಿ ಎಂದರು.

ಈ 101 ವರ್ಷದ ಭಾರತೀಯ ರಾಷ್ಟ್ರೀಯ ಸೇನೆಯ ಹಿರಿಯ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಚಿತ್ರ ಪ್ರದರ್ಶನಕ್ಕೂ ಮೊದಲು ನಿರ್ದೇಶಕರಾದ ಡಾ.ರೂಪಾ ಅಯ್ಯರ್ ಮತ್ತು ಚಲನಚಿತ್ರದ ಇತರ ಕಲಾವಿದರನ್ನೂ ಗೌರವಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !