September 16, 2026
Wednesday, September 16, 2026
spot_img

ಸ್ಕೂಲ್‌ ಫ್ರೆಂಡ್‌ ಅಸ್ಗರ್‌ ಅಲಿ ವೋರಾಗೆ ಸಹಾಯ ಹಸ್ತ ಚಾಚಿದ ಪ್ರಧಾನಿ ಮೋದಿ, ಸಮಸ್ಯೆ ಇತ್ಯರ್ಥ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶಾಲಾ ದಿನಗಳ ಸ್ನೇಹಿತರೊಬ್ಬರಿಗೆ ಸಹಾಯ ಹಸ್ತ ಚಾಚಿದ್ದು, ದಶಕಗಳಿಂದ ಬಾಕಿ ಇದ್ದ ವಿವಾದಿತ ಜಮೀನನ್ನು ಮತ್ತೆ ಮರಳಿಸಿದ್ದಾರೆ.

ಪ್ರಧಾನಿ ಮೋದಿ ಜತೆ ಶಾಲೆಯಲ್ಲಿ ಒಟ್ಟಿಗೇ ಓದಿದ್ದ 81 ವರ್ಷದ ಅಸ್ಗರ್ ಅಲಿ ವೋರಾ ಮಹಾರಾಷ್ಟ್ರದ ಮೀರಾ-ಭಯಂದರ್‌ನಲ್ಲಿರುವ ಜಮೀನನ್ನು ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರ ಹಿಂಬಾಲಕರು ಕಬಳಿಸಿದ್ದರು ಎಂದು ದೂರಿದ್ದರು. ಈ ಹಿನ್ನೆಲೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಜಮೀನು ಕಬಳಿಕೆ ಮತ್ತೆ ಮಾತನಾಡಿದರು. ಮಧ್ಯಪ್ರವೇಶಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.

ಇದಾದ ಕೆಲ ದಿನಗಳಲ್ಲಿಯೇ ಶಾಸಕ ನರೇಂದ್ರ ಮೆಹ್ತಾ ಸೈಟಿನ ಹಕ್ಕನ್ನು ಬಿಟ್ಟುಕೊಟ್ಟಿದ್ದು ವೋರಾ ವಿರುದ್ಧ ದಾಖಲಿಸಿದ್ದ ಪೊಲೀಸ್ ದೂರನ್ನು ವಾಪಸ್ ಪಡೆದಿದ್ದಾರೆ. 1989 ರಲ್ಲಿ ಭಯಂದರ್ ಪೂರ್ವದ ನವಘರ್‌ನಲ್ಲಿ 2,810 ಚದರ ಮೀಟರ್ ಜಮೀನನ್ನು ನೋಂದಾಯಿತ ಒಪ್ಪಂದದ ಮೂಲಕ ಖರೀದಿಸಿದ್ದೆ. ಬಳಿಕ ಈ ಜಾಗವನ್ನು ನಾನು ಯಾರಿಗೂ ಮಾರಾಟ ಮಾಡಿಲ್ಲ ಎಂದು ವೋರಾ ತಿಳಿಸಿದ್ದರು. ಆದರೆ 2011 ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಅರಿವಿಗೆ ಬಾರದಂತೆ ಜಮೀನನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಇದರ ಒಂದು ಭಾಗ ಸ್ವಯಂ ಬಿಲ್ಡರ್ಸ್‌ ವಶದಲ್ಲಿತ್ತು. ಇನ್ನೊಂದು ಭಾಗವನ್ನು ಮೆಹ್ತಾ ಅವರ ಅನುಯಾಯಿಗಳ ಹೆಸರಿನಲ್ಲಿತ್ತು. ಸದ್ಯ ಪ್ರಕರಣ ಸುಖಾಂತ್ಯ ಕಂಡಿದೆ. ಪ್ರಧಾನಿ ಮೋದಿ ತಮ್ಮ ಬಾಲ್ಯದ ಸ್ನೇಹಿತನನ್ನು ನೆನೆಪಿನಲ್ಲಿ ಇಟ್ಟುಕೊಂಡು ಸಹಾಯ ಮಾಡಿದ ಸರಳತೆಯನ್ನು ಜನ ಕೊಂಡಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !