October 11, 2026
Sunday, October 11, 2026
spot_img

ಗಡಿ ದಾಟಿದ ಉಗ್ರರ ಜಾಲಕ್ಕೆ ಬಿಗಿ ಕಡಿವಾಣ: ‘SBN’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಡಿ ದಾಟಿ ಶಸ್ತ್ರಾಸ್ತ್ರ, ಸ್ಫೋಟಕ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ನಡೆಸುತ್ತಿದ್ದ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಮೂಲದ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ (SBN) ಅನ್ನು ಕೇಂದ್ರ ಸರ್ಕಾರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುವುದು

ಗೃಹ ಸಚಿವಾಲಯದ ಅಧಿಸೂಚನೆಯ ಪ್ರಕಾರ, UAPAಯ ಸೆಕ್ಷನ್ 35(1)(a) ಅಡಿ SBN ಅನ್ನು ಕಾಯ್ದೆಯ ಮೊದಲ ಪಟ್ಟಿಗೆ ಸೇರಿಸಲಾಗಿದೆ. ಯುವಕರು ಹಾಗೂ ಸ್ಥಳೀಯ ಅಪರಾಧಿಗಳನ್ನು ಪುಸಲಾಯಿಸಿ ಶಸ್ತ್ರಾಸ್ತ್ರ, ಸ್ಫೋಟಕ ಮತ್ತು ಮಾದಕ ವಸ್ತುಗಳ ಸಾಗಣೆಗೆ ಬಳಸುವುದು, ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುವುದು ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ಪ್ರಚೋದನಕಾರಿ ವಿಷಯ ಹರಡುವುದು ಈ ಜಾಲದ ವಿರುದ್ಧದ ಪ್ರಮುಖ ಆರೋಪಗಳಾಗಿವೆ.

ಇದನ್ನೂ ಓದಿ:

14 ರಾಜ್ಯಗಳಲ್ಲಿ ಕಾರ್ಯಾಚರಣೆ

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಆಗಸ್ಟ್ 12ರಂದು ಭದ್ರತಾ ಸಂಸ್ಥೆಗಳು 14 ರಾಜ್ಯಗಳಲ್ಲಿ ನಡೆಸಿದ ಸಮನ್ವಯಿತ ಕಾರ್ಯಾಚರಣೆಯಲ್ಲಿ 253 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. SBN ವಿರುದ್ಧ 80ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದ್ದು, 200ಕ್ಕೂ ಹೆಚ್ಚು ಬಂಧನಗಳು ನಡೆದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಾರ್ಯಾಚರಣೆಯಲ್ಲಿ IEDಗಳು, ಗ್ರೆನೇಡ್‌ಗಳು, ಪಿಸ್ತೂಲು, ಜೀವಂತ ಗುಂಡುಗಳು ಹಾಗೂ ಗೂಢಚರ್ಯೆಗೆ ಬಳಸಲಾಗುತ್ತಿದ್ದ CCTV ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಭದ್ರತಾ ಸಂಸ್ಥೆಗಳ ಬಹುರಾಜ್ಯ ಕಾರ್ಯಾಚರಣೆಯ ಬಳಿಕ ಇದೀಗ SBNಗೆ UAPA ಅಡಿ ಅಧಿಕೃತವಾಗಿ ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಲಾಗಿದೆ. ಜಾಲದ ಹಣಕಾಸು, ನೇಮಕಾತಿ ಮತ್ತು ಗಡಿ ಸಂಪರ್ಕಗಳ ಸಂಪೂರ್ಣ ತನಿಖೆ ಮುಂದಿನ ಹಂತದಲ್ಲಿ ಪ್ರಮುಖವಾಗಲಿದೆ.

Must Read