April 8, 2026
Wednesday, April 8, 2026
spot_img

ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಗಗನಕ್ಕೇರಿದ ಕಚ್ಚಾ ತೈಲದ ಬೆಲೆ: ಜಾಗತಿಕ ತೈಲ ಮಾರ್ಕೆಟ್ ಗಡಗಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ಮುಜ್ ಜಲಸಂಧಿ ಮೇಲೆ ಏನೇನಾದರೂ ತಡೆ ಬಂದರೆ, ಇರಾನಿನ ಇಂಧನ ಘಟಕಗಳಿಗೆ ಅಮೆರಿಕ ದಾಳಿ ನಡೆಸಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈ ಘೋಷಣೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ ಮತ್ತು ವಿಶ್ವದ ಇಂಧನ ಸುರಕ್ಷತೆಯ ಮೇಲೆ ಆತಂಕ ಹೆಚ್ಚಿಸಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.4ರಷ್ಟು ಏರಿಕೆಯಾಗಿದ್ದು 110.60 ಡಾಲರ್‌ (ಸುಮಾರು 10,287 ರೂ) ತಲುಪಿದೆ. ಅದೇ ಸಮಯದಲ್ಲಿ ಅಮೆರಿಕನ್ ಕಚ್ಚಾ ತೈಲದ ಬೆಲೆ ಶೇ. 1.8ರಷ್ಟು ಏರಿಕೆ ಕಾಣಿಸಿ 113.60 ಡಾಲರ್‌ (ಸುಮಾರು 10,568 ರೂ) ದಾಖಲಾಗಿದೆ. ಇರಾನ್ ವಿರುದ್ಧ ಮಾರ್ಗ ಬಂದ್ ಮಾಡಿರುವ ಕಾರಣ, ಜಾಗತಿಕ ಇಂಧನ ಸರಬರಾಜಿನ ಮೇಲೆ ಗಂಭೀರ ಒತ್ತಡ ಉಂಟಾಗಿದೆ.

ಇದನ್ನೂ ಓದಿ:

ಆದರೆ ಇರಾನ್ ಯುದ್ಧ ನಷ್ಟದ ಪರಿಹಾರ ಇಲ್ಲದಿದ್ದರೆ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ ಎಂದು ಪಟ್ಟುಹಿಡಿದೆ.
ಜಾಗತಿಕ ತೈಲ ಬೆಲೆ ಏರಿಕೆ, ಭದ್ರತಾ ಗಂಭೀರತೆ, ಮತ್ತು ಇಂಧನ ಪೂರೈಕೆ ಅಸ್ಥಿರತೆ ವಿಶ್ವ ಮಾರುಕಟ್ಟೆ ಮತ್ತು ಆಮದು ನಿರ್ವಹಣಾ ತಂತ್ರಗಳಿಗೆ ಪ್ರಭಾವ ಬೀರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !