ಮೇಷ.
ನಿಲ್ಲಿಸಿದ್ದ ಯೋಜನೆ ಅಥವಾ ಕಾರ್ಯಕ್ಕೆ ಮರುಚಾಲನೆ ನೀಡಿ. ಅನ್ಯರ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರಿ. ಕೌಟುಂಬಿಕ ಸಾಮರಸ್ಯ.
ವೃಷಭ
ಹೊರಗಿನ ವ್ಯವಹಾರದಲ್ಲಿ ಹೆಚ್ಚ್ಚು ವ್ಯಸ್ತ. ಆರ್ಥಿಕ ಸ್ಥಿರತೆ. ದಂಪತಿಗಳಿಗೆ ಶುಭ ಬೆಳವಣಿಗೆ. ಆಸ್ತಿ ಮಾರಾಟಕ್ಕೆ ಸೂಕ್ತ ದಿನ.
ಮಿಥುನ
ಸಹೋದ್ಯೋಗಿ ಜತೆ ಎಚ್ಚರದಿಂದ ವ್ಯವಹರಿಸಿ. ಜಗಳ, ಭಿನ್ನಮತ ಉಂಟಾದೀತು. ದೀರ್ಘಾವಧಿ ಯೋಜನೆಗೆ ಹಣ ಹೂಡಬೇಡಿ.
ಕಟಕ
ಹೊಟ್ಟೆ ಕೆಡುವ ಸಾಧ್ಯತೆ. ಆಹಾರದಲ್ಲಿ ಎಚ್ಚರ ವಹಿಸಿ. ಸಂಗಾತಿ ಜತೆ ಭಿನ್ನಾಭಿಪ್ರಾಯ. ದೇಹಾಭ್ಯಾಸ ಅತಿಯಾಗಿ ಮಾಡಬೇಡಿ.
ಸಿಂಹ
ಲಾಭವೂ ಇಲ್ಲದ ನಷ್ಟವೂ ಇಲ್ಲದ ದಿನ. ಹಣ ಗಳಿಕೆಯ ಸುಲಭ ದಾರಿಗೆ ಹೋಗದಿರಿ. ಆಪ್ತರೊಬ್ಬರು ಮನಸ್ಸಿಗೆ ನೆಮ್ಮದಿ, ಸಂತೋಷ ತರುವರು.
ಕನ್ಯಾ
ಮನೆಯವರ ಜತೆ ಅನುನಯದಿಂದ ವರ್ತಿಸಿ. ಕೋಪತಾಪ ಬೇಡ. ಮಕ್ಕಳು ಹಠಮಾರಿ ಧೋರಣೆ ತೋರುವರು. ಸಂಯಮವಿರಲಿ.
ತುಲಾ
ಆರ್ಥಿಕ ಸ್ಥಿರತೆ, ವ್ಯವಹಾರ ಹಿಗ್ಗಿಸಲು ಅವಕಾಶ. ಕೌಟುಂಬಿಕ ವಿಚಾರದಲ್ಲಿ ತುಸು ಚಿಂತೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ.
ವೃಶ್ಚಿಕ
ಸ್ವಂತ ವ್ಯವಹಾರ ಆರಂಭಿಸಲು ಕಾಲ ಸೂಕ್ತವಾಗಿದೆ. ವಿದ್ಯಾರ್ಥಿ ಗಳು ಜಡತ್ವ ಬಿಟ್ಟು ಉತ್ಸಾಹಿಗಳಾಗಬೇಕು. ಆರ್ಥಿಕ ಒತ್ತಡ ಅಂತ್ಯ.
ಧನು
ಇತರರ ಜತೆ ಮಾತನಾಡುವಾಗ ತಾಳ್ಮೆ ವಹಿಸಿ. ಸಣ್ಣ ವಿಷಯಕ್ಕೆ ರೇಗದಿರಿ. ಬಂಧುಗಳ ಜತೆ ಪ್ರವಾಸ ಹೋಗುವ ಅವಕಾಶ ಸಿಗಲಿದೆ.
ಮಕರ
ಮನಸ್ಥಿತಿ ಏರುಪೇರು ಮಾಡುವ ಬೆಳವಣಿಗೆ ಉಂಟಾದೀತು. ಎಲ್ಲವನ್ನು ಸರಿತೂಗಿಸಿಕೊಂಡು ಹೋಗಿ. ಅನ್ಯರ ತಿರಸ್ಕಾರಕ್ಕೆ ಬೆಲೆ ಕೊಡಬೇಡಿ.
ಕುಂಭ
ವೃತ್ತಿಯಲ್ಲಿ ಹೊಸ ಸವಾಲು. ಧೃತಿಗೆಡಬೇಡಿ. ಆರ್ಥಿಕ ನಷ್ಟ. ಖರ್ಚು ಕಡಿಮೆ ಮಾಡಲು ಗಮನ ಕೊಡಿ. ಬಂಧು ಜತೆ ವಿರಸವಾದೀತು.
ಮೀನ
ಸಂಗಾತಿ ಜತೆ ಪ್ರಾಮಾಣಿಕತೆಯಿಂದ ವರ್ತಿಸಿ. ಮುಚ್ಚುಮರೆ ಬೇಡ. ವೃತ್ತಿಯಲ್ಲಿ ತೊಡಕು. ಗಮನವಿಟ್ಟು ಕಾರ್ಯ ನಿರ್ವಹಿಸಿ.



