ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಇಡೀ ದಿನ ಮನೆಯಲ್ಲಿರೋದಕ್ಕೆ ಆಗೋದೇ ಇಲ್ಲ. ಮನೆಯವರಿಗೆ ಕಾಟ ಕೊಡ್ತಾರೆ ಇಲ್ಲವೇ ತಾವೇ ಬೋರ್ ಮಾಡಿಕೊಂಡು ಮೂಲೆ ಹಿಡೀತಾರೆ. ಮನೆಯ ಬಳಿ ಸಮ್ಮರ್ ಕ್ಯಾಂಪ್ ಇದ್ದರೆ ಸರಿ, ಇಲ್ಲದೇ ಹೋದರೆ ಮನೆಯನ್ನೇ ಸಮ್ಮರ್ ಕ್ಯಾಂಪ್ ಮಾಡಿಕೊಳ್ಳಿ. ಮಕ್ಕಳಿಗೆ ಎಂಟರ್ಟೈನ್ ಮಾಡುತ್ತಾ ನೀವು ಏನಾದರೂ ಹೊಸತನ್ನು ಕಲಿಯಿರಿ..
ಪೇಂಟಿಂಗ್ ಹಾಗೂ ಡ್ರಾಯಿಂಗ್
ಮಕ್ಕಳಿಗೆ ಹೊಸ ಪುಸ್ತಕಗಳು, ಹೊಸ ಬಣ್ಣಗಳನ್ನು ತಂದುಕೊಡಿ. ಅವರಿಗೆ ನಿತ್ಯವೂ ಹೊಸ ಡ್ರಾಯಿಂಗ್ ಮಾಡುವಂತೆ ಪ್ರೇರೇಪಿಸಿ, ಮಕ್ಕಳ ಅಂದದ ಡ್ರಾಯಿಂಗ್ ನಂತರ ಅವರಿಗೆ ಐಸ್ಕ್ರೀಂ ಅಥವಾ ಇನ್ಯಾವುದಾದರೂ ಒಂದು ಟ್ರೀಟ್ ನೀಡಿ.
DIY ART
ಮಕ್ಕಳೇ ಮಾಡಬಹುದಾದಂತಹ ಆರ್ಟ್ ಕಡೆ ಗಮನ ಕೊಡಿ, ಬಾಟಲಿ ಪೇಂಟ್ ಮಾಡೋದು, ಪಿಸ್ತಾ ಸಿಪ್ಪೆಯಿಂದ ಏನನ್ನಾದರೂ ತಯಾರಿಸೋದು, ಕಲ್ಲುಗಳಿಗೆ ಬಣ್ಣ ಹಾಕೋದು, ಐಸ್ಕ್ರೀಂ ಕಡ್ಡಿಯಲ್ಲಿ ಮನೆ ಕಟ್ಟೋದು, ಇನ್ನಿತರ ಆಕ್ಟಿವಿಟಿಗಳನ್ನು ಮಾಡಿಸಿ.
ನೀರಿನಲ್ಲಿ ಆಟ
ಮನೆಯ ಅಕ್ಕಪಕ್ಕ ಮಕ್ಕಳಿದ್ದರೆ ನೀರಿನ ಜೊತೆ ಆಟ ಆಡಲು ಬಿಡಿ, ಪೈಪ್ನಿಂದ ನೀರನ್ನು ಎರಚಿಕೊಳ್ಳಲಿ. ವಾಟರ್ ಬಲೂನ್ ಜತೆ ಆಟ ಆಡಲಿ, ಟಬ್ನಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳಲಿ.
ಬರವಣಿಗೆ
ಮಕ್ಕಳಿಗೆ ಬರವಣಿಗೆ ಮೇಲೆ ಆಸಕ್ತಿ ಹುಟ್ಟಿಸಿ. ನಿತ್ಯವೂ ಏನು ಮಾಡಿದೆ ಎನ್ನುವುದನ್ನು ಬರೆಸಿ. ನಾಳೆಯ ಪ್ಲಾನ್ಗಳನ್ನು ಬರೆಸಿ. ಇದರಿಂದ ಅವರ ಬರವಣಿಗೆ, ಸ್ಪೀಡ್ ಹಾಗೂ ಕ್ರಿಯೇಟಿವಿಟಿ ಹೆಚ್ಚಾಗುತ್ತದೆ.
ಬೆಡ್ಶೀಟ್ ಹಾಗೂ ದಿಂಬುಗಳಿಂದ ಮನೆಯನ್ನು ಮಾಡಿಕೊಡಿ. ಮಕ್ಕಳು ಇದರಲ್ಲಿ ಕುಳಿತೇ ತುಂಬಾ ಹೊತ್ತು ಟೈಮ್ ಪಾಸ್ ಮಾಡುತ್ತಾರೆ.



