April 9, 2026
Thursday, April 9, 2026
spot_img

US-Iran Ceasefire | ಹಾರ್ಮುಜ್ ದಾಟೋಕೆ ಹೊಸ ಮಾರ್ಗ ರೆಡಿ ಮಾಡಿದ ಐಆರ್‌ಜಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ–ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಹೊಸ ನಿಯಮಗಳು ಜಾರಿಯಾಗಿವೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನೌಕಾಪಡೆಯು ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಎರಡು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದೆ. ಈ ಕ್ರಮವು ಜಾಗತಿಕ ತೈಲ ಸಾಗಣೆ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ, ಸಾಮಾನ್ಯವಾಗಿ ಬಳಸಲಾಗುತ್ತಿದ್ದ ಸಮುದ್ರ ಮಾರ್ಗದಲ್ಲಿ ಮೈನ್ಸ್‌ಗಳು ಇರುವ ಕಾರಣ, ಆ ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ. ಹೀಗಾಗಿ ಲಾರಕ್ ದ್ವೀಪದ ಸಮೀಪದ ಇರಾನ್ ನಿಯಂತ್ರಿತ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಒಮಾನ್ ಸಮುದ್ರದಿಂದ ಬರುವ ಹಡಗುಗಳು ಲಾರಕ್ ದ್ವೀಪದ ಉತ್ತರ ಭಾಗದಿಂದ ಪ್ರವೇಶಿಸಿ, ಪರ್ಷಿಯನ್ ಕೊಲ್ಲಿಯಿಂದ ಹೊರಡುವ ಹಡಗುಗಳು ದಕ್ಷಿಣ ಭಾಗದ ಮೂಲಕ ಸಾಗಬೇಕಾಗಿದೆ.

ಇದನ್ನೂ ಓದಿ:

ಈ ಹೊಸ ಮಾರ್ಗಗಳಲ್ಲಿ ಸಂಚರಿಸುವ ಎಲ್ಲಾ ವಾಣಿಜ್ಯ ಹಡಗುಗಳು ಐಆರ್‌ಜಿಸಿ ನೌಕಾಪಡೆಯೊಂದಿಗೆ ನೇರ ಸಮನ್ವಯ ಸಾಧಿಸುವುದು ಕಡ್ಡಾಯವಾಗಿದೆ. ಕೆಲವು ವರದಿಗಳ ಪ್ರಕಾರ, ಈ ಮಾರ್ಗ ಬಳಕೆಗೆ ಶುಲ್ಕ ವಿಧಿಸಲಾಗುತ್ತಿದ್ದು, ಕ್ರಿಪ್ಟೋ ಕರೆನ್ಸಿ ಅಥವಾ ಚೀನೀ ಯುವಾನ್‌ನಲ್ಲಿ ಪಾವತಿ ವ್ಯವಸ್ಥೆಯೂ ಜಾರಿಯಲ್ಲಿದೆ.

ಕದನ ವಿರಾಮದ ನಡುವೆಯೂ ಹಾರ್ಮುಜ್‌ನಲ್ಲಿ ಸಾಮಾನ್ಯ ಸಂಚಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಪ್ರಮುಖ ಶಿಪ್ಪಿಂಗ್ ಕಂಪನಿಗಳು ಇನ್ನೂ ಎಚ್ಚರಿಕೆಯ ನಿಲುವು ಮುಂದುವರಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !