April 9, 2026
Thursday, April 9, 2026
spot_img

ಮದುವೆ ಕಾರ್ಡ್‌ ಕೊಡೋಕೆ ಹೋದ ಯುವಕನ ಮೇಲೆ ಹರಿದ ಟ್ರಾಕ್ಟರ್‌, ಸ್ಥಳದಲ್ಲೇ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನೊಬ್ಬ ಅಪಘಾತದಲ್ಲಿ ಮೃತಪಟ್ಟ ಘಟನೆ ಆನೇಕಲ್‌ನಲ್ಲಿ ನಡೆದಿದೆ.

ಹುಳಿಮಾವು ಗ್ರಾಮದಲ್ಲಿ ಕೋದಂಡ ರಾಮಸ್ವಾಮಿಯ ಬ್ರಹ್ಮರಥೋತ್ಸವ ನಡೆದಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಪಲ್ಲಕ್ಕಿ ಉತ್ಸವ ನಡೆದಿದೆ. ಈ ವೇಳೆ ಪಲ್ಲಕ್ಕಿಗಳನ್ನ ನೋಡುತ್ತಾ ನಿಂತಿದ್ದ ಯುವಕನ ಮೇಲೆ ಟ್ರ್ಯಾಕ್ಟರ್​​ ಹರಿದಿದ್ದು, ಅಕ್ಷತ್ (27) ಮೃತಪಟ್ಟಿದ್ದಾರೆ.

ಬನಶಂಕರಿ ನಿವಾಸಿ ಅಕ್ಷತ್‌ ಮದುವೆಯ ಕರೆಯೋಲೆ ನೀಡಲು ಮನೆಯಿಂದ ಹೊರಗೆ ಹೊರಟಿದ್ದರು. ಜಾತ್ರೆ ನಡೆಯುತ್ತಿದೆ ನೋಡಿಕೊಂಡು ಹೋಗೋಣ ಎಂದು ನಿಲ್ಲಿಸಿದ್ದರೆ. ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು, ಚಾಲಕ ಪರಾರಿಯಾಗಿದ್ದಾನೆ. ಈತನಿಗಾಗಿ ಹುಡುಕಾಟ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !