ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಯುವ ಪ್ರತಿಭೆ ವೈಭವ್ ಸೂರ್ಯವಂಶಿಯ ಸಾಹಸಮಯ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ 15 ವರ್ಷದ ಈ ಯುವ ಆಟಗಾರ, ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ ಎದುರಿಸಿ ಮೊದಲ ಓವರ್‌ನಲ್ಲೇ ಎರಡು ಭರ್ಜರಿ ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಇನಿಂಗ್ಸ್ ಆರಂಭದಲ್ಲೇ ಬುಮ್ರಾ ಎಸೆದ ಮೊದಲ ಎಸೆತವನ್ನು ವೈಭವ್ ಲಾಂಗ್ ಆನ್ ದಿಕ್ಕಿನಲ್ಲಿ ಸಿಕ್ಸರ್‌ಗೆ ಅಟ್ಟಿದರು. ಈ ಆಘಾತದಿಂದ ಪ್ರೇಕ್ಷಕರು ಮಾತ್ರವಲ್ಲ, ಬುಮ್ರಾ ಕೂಡ ಒಂದು ಕ್ಷಣ ನಗುತ್ತಾ ಪ್ರತಿಕ್ರಿಯಿಸಿದ ದೃಶ್ಯ ಮೈದಾನದಲ್ಲಿ ಗಮನಸೆಳೆಯಿತು. ಆದರೆ ಯುವ ಬ್ಯಾಟರ್ ಅಲ್ಲಿಗೇ ನಿಲ್ಲದೆ, ಅದೇ ಓವರ್‌ನ ನಾಲ್ಕನೇ ಎಸೆತದಲ್ಲೂ ಸ್ಲೋವರ್ ಬಾಲ್ ಅನ್ನು ಅಂದಾಜಿಸಿ ಮಿಡ್‌ವಿಕೆಟ್ ಮೇಲೆ ಮತ್ತೊಂದು ಸಿಕ್ಸರ್ ಸಿಡಿಸಿದರು.
ಇದನ್ನೂ ಓದಿ:
ಟಿ20 ಕ್ರಿಕೆಟ್‌ನಲ್ಲಿ ಬುಮ್ರಾ ವಿರುದ್ಧ ಸಿಕ್ಸರ್ ಬಾರಿಸುವುದು ಸುಲಭದ ಸಾಧನೆ ಅಲ್ಲ. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಶುಭಮನ್ ಗಿಲ್ ಮತ್ತು ಟ್ರಾವಿಸ್ ಹೆಡ್‌ಗಳಂತಹ ಅನುಭವಿ ಬ್ಯಾಟರ್‌ಗಳಿಗೂ ಇದು ಸಾಧ್ಯವಾಗದ ಸಂದರ್ಭದಲ್ಲೇ ವೈಭವ್ ಮಾಡಿದ ಈ ಸಾಧನೆ ದೊಡ್ಡ ಮಟ್ಟದ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಪ್ರದರ್ಶನದ ಬಳಿಕ ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ವೈಭವ್‌ನ್ನು ಭವಿಷ್ಯದ ಸ್ಟಾರ್ ಎಂದು ಕೊಂಡಾಡುತ್ತಿದ್ದಾರೆ. ಐಪಿಎಲ್ ವೇದಿಕೆಯಲ್ಲಿ ಇಷ್ಟು ಕಿರಿಯ ವಯಸ್ಸಿನಲ್ಲಿ ತೋರಿದ ಆತ್ಮವಿಶ್ವಾಸ ಎಲ್ಲರನ್ನೂ ಅಚ್ಚರಿ ಪಡಿಸಿದೆ.



