April 10, 2026
Friday, April 10, 2026
spot_img

READING | ಪುಸ್ತಕ ಓದೋಕೆ ಶುರು ಮಾಡಿದ್ರೆ ಏನು ʼಮಹಾʼ ಬದಲಾವಣೆಗಳು ಬರಬಹುದು?

ನಾನು ಪುಸ್ತಕ ಪ್ರೇಮಿ, ಆದರೆ ಓದೋಕೆ ಇಷ್ಟವಿಲ್ಲ. ಮನೆಯಲ್ಲಿ ಪುಸ್ತಕಗಳು ಇರಬೇಕು ಅಷ್ಟೇ. ಓದುವ ವಯಸ್ಸಿನಲ್ಲಿ ಓದಿಯೇ ತಾನೆ ಮುಂದೆ ಬಂದಿದ್ದೀವಿ, ಮತ್ತೆ ಓದೋದು ಅಂದ್ರೆ? ಖಂಡಿತಾ ಸಾಧ್ಯವಿಲ್ಲ ಅಂತೀರಾ? ಹೆಚ್ಚಿಗೆ ಬೇಡ ದಿನಕ್ಕೆರಡು ಪುಟ ಓದೋಕೆ ಶುರು ಮಾಡಿ ನೀವು ಪುಸ್ತಕ ಹುಳು ಆಗೋದ್ರಲ್ಲಿ ಅನುಮಾನವೇ ಇಲ್ಲ.

ಪುಸ್ತಕ, ಮಳೆ, ಕಿಟಕಿ ಹಾಗೂ ಕಾಫಿ ಎಂಥ ಕಾಂಬಿನೇಷನ್‌ ಅಲ್ವಾ? ಬರೀ ಈ ಐಡಿಯಾವನ್ನು ಪ್ರೀತಿಸಬೇಡಿ. ಪುಸ್ತಕ ಓದೋಕೆ ನಿಜಕ್ಕೂ ಒಂದು ಟ್ರೈ ಕೊಟ್ಟೇಬಿಡಿ. ಕೈ ಹಿಡಿದರೆ ಒಕೆ ಕೈ ಹಿಡಿದಿಲ್ಲ ಅಂದ್ರೂ ಓಕೆ. ನಮ್ಮ ನಿಮ್ಮ ಸೀರೀಸ್‌, ಸಿನಿಮಾಗಳಂತೆ ಪುಸ್ತಕಗಳು ಕೈ ಕೊಡೋದಿಲ್ಲ. ಇಂಟರ್ನೆಟ್‌ ಬೇಕಿಲ್ಲ, ಸ್ಕ್ರೀನ್‌ ಬೇಕಿಲ್ಲ, ಕಣ್ಣಿಗೆ ನೋವೂ ಇಲ್ಲ.

ಪುಸ್ತಕ ಓದೋದ್ರಿಂದ ಏನು ಲಾಭ?

ದೇಹಕ್ಕೆ ವರ್ಕೌಟ್‌ ಮಾಡೋಕೆ ಜಿಮ್‌ಗೆ ಹೋಗ್ತೀರಿ ಅಲ್ವಾ? ಅಂತೆಯೇ ದಿನಕ್ಕೆ ಆರು ನಿಮಿಷ ಪುಸ್ತಕ ಓದಿದ್ರೂ ಸಾಕು ಮೆದುಳಿಗೆ ವ್ಯಾಯಾಮ ಆಗಿಹೋಗುತ್ತದೆ.

ಯಾರದ್ದಾದರೂ ಜತೆ ಮಾತನಾಡುತ್ತಾ ವಿಭಿನ್ನವಾದ ಪದಗಳನ್ನು ಬಳಸೋದು, ಒಂದು ವಿಷಯದ ಬಗ್ಗೆ ನಿಜಕ್ಕೂ ತಿಳಿದುಕೊಂಡು ಮಾತನಾಡೋದು ನಿಮ್ಮ ತೂಕ ಹೆಚ್ಚಿಸುತ್ತದೆ. ಇದು ಪುಸ್ತಕ ಓದೋದ್ರಿಂದ ಸಾಧ್ಯ.

ಅರ್ಥ ಮಾಡಿಕೊಳ್ಳುವ ಶಕ್ತಿ, ಇನ್ನೊಬ್ಬರ ನೋವಲ್ಲಿ ಹೆಗಲು ನೀಡುವ ಶಕ್ತಿ ನೀಡುತ್ತದೆ. ಭಿನ್ನ ವಿಭಿನ್ನ ಕ್ಯಾರೆಕ್ಟರ್‌ಗಳನ್ನು ನೀವು ಓದಿ ತಿಳಿದುಕೊಂಡರೆ ನಿಜ ಜೀವನಕ್ಕೂ ಸಹಾಯವೇ.

ಪುಸ್ತಕ ಓದುವಾಗ ಮೆದುಳಿನಲ್ಲಿ ಒಂದು ಕ್ರಿಯೆ ನಡೆಯುತ್ತದೆ. ಆ ಕ್ರಿಯೆಯಿಂದಾಗಿ ನಿಮ್ಮ ಫೋಕಸ್‌ ಹಾಗು ಏಕಾಗ್ರತೆ ಹೆಚ್ಚಾಗುತ್ತದೆ. ಕ್ರಿಯೇಟಿವ್‌ ಥಿಂಕಿಂಗ್‌ ಆರಂಭವಾಗುತ್ತದೆ.

ಒತ್ತಡ ಕಡಿಮೆಯಾಗುತ್ತದೆ. ಕೈಯಲ್ಲಿ ಪುಸ್ತಕ ಹಿಡಿದಾಗ ಒಂದು ರಿಲ್ಯಾಕ್ಸ್‌ ಆದ ಭಾವ.

ಪುಸ್ತಕದ ಹುಚ್ಚು ಹಿಡಿಸಿಕೊಳ್ಳುವ ಕಲೆ ಒಂದು ದಿನಕ್ಕೆ ಬರುವಂಥದ್ದಲ್ಲ. ಆದರೆ ಕನಿಷ್ಠ ಒಂದು ಪುಸ್ತಕ ಮುಗಿಸಿದ ನಂತರ ನೀವು ಪ್ರೇಮಿಯಾಗಿರುತ್ತೀರಿ. ಪುಸ್ತಕಗಳನ್ನು ಹುಡುಕುತ್ತೀರಿ. ಓದಿದವರ ಬಳಿ ಕೇಳಿ ತಿಳಿದುಕೊಳ್ಳುತ್ತೀರಿ. ಇಂದಿನಿಂದಲೇ ಒಂದು ಪುಟಕ್ಕೆ ಟೈಮ್‌ ಕೊಡ್ತೀರಲ್ವಾ?

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !