July 4, 2026
Saturday, July 4, 2026
spot_img

ಬಿಹಾರ ವಿಧಾನಸಭೆಗೆ ಬಂತು ಬಾಂಬ್ ಬೆದರಿಕೆ ಮೇಲ್: ಭದ್ರತಾ ಪಡೆಯಿಂದ ತೀವ್ರ ತಪಾಸಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಬಳಿಕ ಬಿಹಾರ ವಿಧಾನಸಭೆಗೂ ಇಂದು ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಭದ್ರತಾ ಪಡೆ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಬಿಹಾರ ವಿಧಾನಸಭೆ ಅಧಿಕಾರಿಗಳಿಗೆ ಬಾಂಬ್ ಇದೆ ಎಂದು ಇಮೇಲ್ ಬಂದಿದ್ದು, ಇದರ ಬೆನ್ನಲ್ಲೇ ಭದ್ರತೆಯಲ್ಲಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಬಾಂಬ್ ಮತ್ತು ಶ್ವಾನ ದಳದ ತಂಡಗಳನ್ನು ಕರೆಸಲಾಗಿದ್ದು, ತೀವ್ರ ಶೋಧ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಇತ್ತೀಚೆಗೆ ದೆಹಲಿ ವಿಧಾನಸಭೆಗೆ ಬೆದರಿಕೆ ಬಂದಿದ್ದು, ಆದರೆ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿತ್ತು. ಇದಾದ ಬೆನ್ನಲ್ಲೇ ದೆಹಲಿ ವಿಧಾನಸಭೆ ಆವರಣದೊಳಗೆ ಕಾರಿನಲ್ಲಿ ನುಗ್ಗಿದ್ದ ವ್ಯಕ್ತಿಯೊಬ್ಬ ಸ್ಪೀಕರ್ ಕಚೇರಿ ಬಳಿ ಹೂವಿನ ಬೊಕ್ಕೆ ಇಟ್ಟು ಹೋಗಿ ಆತಂಕ ಸೃಷ್ಟಿಸಿದ್ದನು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !