May 28, 2026
Thursday, May 28, 2026
spot_img

ಇಂಧನ ಭದ್ರತೆಗೆ ಕೇಂದ್ರದ ಮಾಸ್ಟರ್ ಪ್ಲಾನ್: ರಫ್ತಿಗೆ ಬ್ರೇಕ್, ದೇಶೀಯ ಪೂರೈಕೆಗೆ ಒತ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಕೇಂದ್ರ ಸರ್ಕಾರ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ವಿಶೇಷವಾಗಿ ಡೀಸೆಲ್ ಮತ್ತು ವಿಮಾನ ಇಂಧನದ ರಫ್ತಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ, ದೇಶದ ಒಳಗಿನ ಪೂರೈಕೆಯನ್ನು ಸುಗಮಗೊಳಿಸಲು ಸರ್ಕಾರ ಮುಂದಾಗಿದೆ.

ಡೀಸೆಲ್ ಮೇಲಿನ ರಫ್ತು ಸುಂಕವನ್ನು ಲೀಟರ್‌ಗೆ 34 ರೂ. ಹೆಚ್ಚಿಸಲಾಗಿದೆ. ಇದರಿಂದಾಗಿ ಈ ಹಿಂದೆ ಇದ್ದ 21.5 ರೂ. ಸುಂಕವು ಈಗ 55.5 ರೂ.ಗೆ ಏರಿಕೆಯಾದಂತಾಗಿದೆ.

ವಿಮಾನ ಇಂಧನದ ಮೇಲಿನ ಸುಂಕವನ್ನು ಲೀಟರ್‌ಗೆ 12.5 ರೂ. ಹೆಚ್ಚಿಸಲಾಗಿದ್ದು, ಹಳೆಯ ದರ 29.5 ರೂ.ನಿಂದ 42 ರೂ.ಗೆ ತಲುಪಿದೆ.

ಅಚ್ಚರಿಯೆಂದರೆ, ವ್ಯಾಪಕವಾಗಿ ಬಳಕೆಯಾಗುವ ಪೆಟ್ರೋಲ್ ಮೇಲಿನ ರಫ್ತು ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸದ್ಯ ಪೆಟ್ರೋಲ್ ರಫ್ತಿನ ಮೇಲೆ ಶೂನ್ಯ ಸುಂಕ ಮುಂದುವರಿಯಲಿದೆ.

ಇದರೊಂದಿಗೆ, ದೇಶೀಯವಾಗಿ ಹೈಸ್ಪೀಡ್ ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ 24 ರೂ.ಗೆ ಹಾಗೂ ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಅನ್ನು 36 ರೂ.ಗೆ ಪರಿಷ್ಕರಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !