April 12, 2026
Sunday, April 12, 2026
spot_img

Night Diet | ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ರಾತ್ರಿಯ ಊಟ ಹೆಂಗಿರ್ಬೇಕು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾತ್ರಿ ಊಟ ಅನ್ನೋದು ದಿನದ ಕೊನೆಯ ಆಹಾರ ಮಾತ್ರ ಅಲ್ಲ, ನಮ್ಮ ದೇಹಕ್ಕೆ ವಿಶ್ರಾಂತಿ ಕೊಡೋ ಒಂದು ಮುಖ್ಯ ಹಂತ. ದಿನಪೂರ್ತಿ ಓಡಾಟ, ಕೆಲಸ, ಟೆನ್ಶನ್ ಎಲ್ಲದಕ್ಕೂ ನಂತರ ದೇಹ ರಾತ್ರಿ ರಿಪೇರಿ ಮೋಡ್‌ಗೆ ಹೋಗುತ್ತದೆ. ಅಷ್ಟರಲ್ಲೇ ನಾವು ಏನು ತಿನ್ನುತ್ತೇವೆ ಅನ್ನೋದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದಕ್ಕಾಗಿ ರಾತ್ರಿಯ ಊಟ ಹಗುರವಾಗಿರೋದು ತುಂಬಾ ಮುಖ್ಯ.

ಬಹಳ ಜನರು ದಿನದಲ್ಲಿ ಕಡಿಮೆ ತಿನ್ನಿ, ರಾತ್ರಿ ಹೊಟ್ಟೆ ತುಂಬಾ ಊಟ ಮಾಡೋ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ಇದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ರಾತ್ರಿ ಹೆಚ್ಚು ಎಣ್ಣೆ, ಮಸಾಲೆ, ಫ್ರೈ ಐಟಂಗಳು, ಹೆಚ್ಚು ಅನ್ನ ಅಥವಾ ಫಾಸ್ಟ್ ಫುಡ್ ತಿಂದರೆ ಹೊಟ್ಟೆ ಭಾರವಾಗುತ್ತದೆ. ನಿದ್ರೆ ಸರಿಯಾಗಿ ಬರುವುದಿಲ್ಲ, ಬೆಳಗ್ಗೆ ಸುಸ್ತಾಗಿ ಎದ್ದಂತಾಗುತ್ತದೆ. ದೀರ್ಘಕಾಲ ಹೀಗೆ ಮುಂದುವರಿದರೆ ತೂಕ ಹೆಚ್ಚಳ, ಅಜೀರ್ಣ, ಆಸಿಡಿಟಿ ಸಮಸ್ಯೆಗಳು ಶುರುವಾಗಬಹುದು.

ಇದನ್ನೂ ಓದಿ:

ರಾತ್ರಿ ಊಟದಲ್ಲಿ ಹಗುರವಾದ ಚಪಾತಿ, ತರಕಾರಿ ಪಲ್ಯ, ಸ್ವಲ್ಪ ದಾಲ್, ಸೂಪ್, ಸಲಾಡ್ ಅಥವಾ ಕಡಿಮೆ ಪ್ರಮಾಣದ ಅನ್ನ ಜೊತೆಗೆ ಮೊಸರು ತೆಗೆದುಕೊಂಡರೆ ಉತ್ತಮ. ದೇಹಕ್ಕೆ ಬೇಕಾದ ಪೋಷಕಾಂಶ ಸಿಗುತ್ತದೆ, ಹೊಟ್ಟೆಯೂ ಹಗುರವಾಗಿರುತ್ತದೆ. ವಿಶೇಷವಾಗಿ ಮಲಗೋ ಸಮಯಕ್ಕೆ ಕನಿಷ್ಠ ಎರಡು ಗಂಟೆ ಮೊದಲು ಊಟ ಮುಗಿಸಬೇಕು.

ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಹಗುರವಾದ ಊಟ ಮಾಡಿದರೆ ನಿದ್ರೆ ಚೆನ್ನಾಗಿರುತ್ತದೆ, ಬೆಳಗ್ಗೆ ಫ್ರೆಶ್ ಆಗಿ ಎದ್ದುಕೊಳ್ಳಬಹುದು. ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ರಾತ್ರಿಯ ಊಟದ ಮೇಲೆ ಸ್ವಲ್ಪ ಗಮನ ಕೊಟ್ಟರೆ ಸಾಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !