April 15, 2026
Wednesday, April 15, 2026
spot_img

ಸರ್ಕಾರಿ ಗೌರವದೊಂದಿಗೆ ಆಶಾ ಭೋಸ್ಲೆ ಅಂತ್ಯಕ್ರಿಯೆ: ಕಣ್ಣೀರಿನ ವಿದಾಯ ಹೇಳಿದ ಅಭಿಮಾನಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸಂಗೀತ ಲೋಕದ ಅಮರ ಧ್ವನಿ ಆಶಾ ಭೋಸ್ಲೆ ಅವರಿಗೆ ಇಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ರಾಜ್ಯ ಗೌರವದೊಂದಿಗೆ ಅಂತಿಮ ವಿದಾಯ ನೀಡಲಾಯಿತು. ಅನಾರೋಗ್ಯದಿಂದ 92ನೇ ವಯಸ್ಸಿನಲ್ಲಿ ನಿಧನರಾದ ಈ ದಿಗ್ಗಜ ಗಾಯಕಿಯ ಅಂತ್ಯಕ್ರಿಯೆ ವೇಳೆ ಅಭಿಮಾನಿಗಳು, ಕುಟುಂಬದವರು ಮತ್ತು ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಏಪ್ರಿಲ್ 12ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು. ಇಂದು ಮಧ್ಯಾಹ್ನ ಅವರ ಪಾರ್ಥಿವ ಶರೀರವನ್ನು ಲೋವರ್ ಪರೇಲ್ ನಿವಾಸದಿಂದ ಶಿವಾಜಿ ಪಾರ್ಕ್‌ಗೆ ತರಲಾಗಿದ್ದು, ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಇದನ್ನೂ ಓದಿ:

ಸುಮಾರು ಎಂಟು ದಶಕಗಳ ಕಾಲ ಸಾವಿರಾರು ಹಾಡುಗಳ ಮೂಲಕ ಕೋಟ್ಯಾಂತರ ಹೃದಯಗಳನ್ನು ಗೆದ್ದ ಆಶಾ ಭೋಸ್ಲೆ ಅವರ ಅಗಲಿಕೆ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಧ್ವನಿ ಸದಾ ಅಭಿಮಾನಿಗಳ ಮನದಲ್ಲಿ ಜೀವಂತವಾಗಿರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !